ಮಂಗಳವಾರ, ಮಾರ್ಚ್ 25, 2008

ಕನ್ನಡ ಕನ್ನಡ ಕನ್ನಡವೆಂದುಲಿ...

ಮಾರ್ಚ್ ೧೬ ರ ಬ್ಲಾಗರ್ಸ್ ಮೀಟಿಗೆ ಹೋಗಿ ಬಂದಾಗಿನಿಂದ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ನನಗೆ ಹೇಳಬೇಕೆನಿಸುತ್ತಿರುವುದನ್ನು ಹೇಳಿಬಿಡುತ್ತೇನೆ. ಅಲ್ಲಿಗೆ ಬಂದಿದ್ದ ಪ್ರೊ. ಕೀ. ರಂ. ನಾಗರಾಜ್ ಅವರಿಂದ ವ್ಯಕ್ತವಾದ ಅಭಿಪ್ರಾಯದ ಸಾರಾಂಶ ಹೀಗಿದೆ:
ಒಂದು ಭಾಷೆ ಜನಬಳಕೆಗೆ ಸರಿಹೊಂದುವಂತಾಗಲು ಅದರಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಿರಬೇಕು. ಉದಾಹರಣೆಗೆ ಕೇವಲ ೨೬ ಅಕ್ಷರಗಳನ್ನು ಹೊಂದಿರುವ ಇಂಗ್ಲಿಷ್ ಇಂದು ವಿಶ್ವದಾದ್ಯಂತ ಮಾತನಾಡಲ್ಪಡುತ್ತಿದೆ. ಕನ್ನಡದಲ್ಲಿ ಅನವಶ್ಯಕವಾದ ಅನೇಕ ಅಕ್ಷರಗಳಿವೆ. ಎಲ್ಲ ಮಹಾಪ್ರಾಣಗಳೂ ಅನಾವಶ್ಯಕವಾಗಿವೆ. ಇನ್ನೂ ಕೆಲವು ಅಕ್ಷರಗಳೂ ಕೂಡ ನಿರುಪಯುಕ್ತವಾಗಿವೆ. ಎಲ್ಲ ಸೇರಿ ಇಂತಹ ೧೭ ಅಕ್ಷರಗಳಿವೆ. ಯಾವ ಪದಗಳಲ್ಲಿ ಮಹಾಪ್ರಾಣಗಳಿವೆಯೋ ಅವು ಕನ್ನಡ ಪದಗಳಲ್ಲ, ಬೇರೆ ಭಾಷೆಯಿಂದ ಬಂದ ಪದಗಳು. ಹೀಗಾಗಿ ಈ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕು.
ಮೊದಲ ನೋಟಕ್ಕೆ ಅವರ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತದೆ. ಮಹಾಪ್ರಾಣಾಕ್ಷರಗಳು ಕನ್ನಡದ ಬಹುತೇಕ ಪದಗಳಲ್ಲಿಲ್ಲ. ಅವೇನಿದ್ದರೂ ಸಂಸ್ಕೃತ ಪದಗಳಲ್ಲಿ ಬರುವಂಥವು. ಇವುಗಳೆಲ್ಲವನ್ನು ಬಳಸುವ ಅಗತ್ಯವಿಲ್ಲ. ಹಾಗಾಗಿ ಕನ್ನಡ ವರ್ಣಮಾಲೆಯಿಂದ ೧೭ ಅಕ್ಷರಗಳು (ಸುಮಾರು ಮೂರನೇ ಒಂದು ಭಾಗ) ಕಡಿಮೆಯಾದರೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಆದರೆ ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.

ಇರಲಿ, ಆ ೧೭ ಅಕ್ಷರಗಳನ್ನು ತೆಗೆದಿದ್ದಾರೆ ಎಂದುಕೊಂಡರೆ, ಸಂಸ್ಕೃತ ಶಬ್ದಗಳನ್ನು ಹೇಗೆ ಬರೆಯುತ್ತಾರೆ? ಒಂದೊಂದು ಅಕ್ಷರಕ್ಕೂ ಬೆಲೆ ಕೊಡುವ ಸಂಸ್ಕೃತ ಪದಗಳನ್ನು ಸಂಕ್ಷೇಪಿಸಿದ ಕನ್ನಡ ವರ್ಣಮಾಲೆಯ ಸಹಾಯದಿಂದ ಬರೆಯುವುದು ಅಸಾಧ್ಯ. ಸಂಸ್ಕೃತ ಪದಗಳು ಕನ್ನಡ ಪದಗಳನ್ನು ಮರೆಸಿವೆ ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಉಪಯೋಗಿಸದೆ ಮಾತನಾಡುವುದು ಸಾಧ್ಯವೇ? ನಾವು ಬೇಡ ಬೇಡವೆಂದರೂ ನಮಗೇ ಗೊತ್ತಿಲ್ಲದೆ ನೂರಾರು ಪರಭಾಷೆಯ ಪದಗಳನ್ನು ನಾವು ಉಪಯೋಗಿಸುತ್ತೇವೆ. ನಾವು ದಿನನಿತ್ಯ ಬಳಸುವ ಸೂರ್ಯ, ಚಂದ್ರ, ವಿಮಾನ ಮುಂತಾದವುಗಳಿಗೆ ಅಚ್ಚ ಕನ್ನಡದ ಪದಗಳು (ನೇಸರ, ತಿಂಗಳು, ಗಾಳಿತೇರು) ಎಷ್ಟೊಂದು ಜನರಿಗೆ ತಿಳಿದೇ ಇಲ್ಲ. ಇನ್ನು ನೀರು, ಚಿತ್ತಾರ ಇಂತಹ ಪದಗಳನ್ನು ತದ್ಭವಗಳು ಎಂದು ಕನ್ನಡಕ್ಕೆ ಇಳಿಸಿಬಿಡುತ್ತೇವೆ. (ಇವುಗಳಿಗೆ ಅಚ್ಚ ಕನ್ನಡ ಪದಗಳು ನನಗೂ ತಿಳಿದಿಲ್ಲ, ನಿಮಗೆ ತಿಳಿದಿದ್ದರೆ ತಿಳಿಸಿ). ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ. ಅಷ್ಟಕ್ಕೂ ಸಂಸ್ಕೃತ ಪದಗಳನ್ನು ಉಪಯೋಗಿಸಬಾರದು ಎಂದೇನಿದೆ? ಇಂಗ್ಲಿಷ್ ಸಹ ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆದೇ ಬೆಳೆದಿರುವುದು (ಉದಾ: ಮಾತೃ -> Mother, ಪಿತೃ -> Father, ಭ್ರಾತೃ -> Brother), ಅಲ್ಲವೇ? ಮನುಷ್ಯನೇ ಆಗಲಿ ಭಾಷೆಯೇ ಆಗಲಿ ಬೆಳೆಯುವುದು ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವವಿದ್ದಾಗ ಮಾತ್ರ. ಇದು ನನ್ನದು ಅದು ನಿನ್ನದು ಎಂಬ ಸಂಕುಚಿತ ಮನೋಭಾವದಿಂದಲ್ಲ.

ಕನ್ನಡ ಮಾತನಾಡುವವರು/ಮಾತನಾಡಬೇಕಾದವರು ಯಾರು? ನಾವು ತಾನೆ? ಬೆಂಗಳೂರಿನಲ್ಲಿ "ತಮಿಳ್ ತೆರಿಮಾ" ಎಂದು ಕೇಳಿದರೆ "ತೆರಿದು" ಎನ್ನುವ ಕನ್ನಡಿಗರು ಸಿಗುತ್ತಾರೆಯೇ ಹೊರತು "ಇಲ್ಲ" ಎನ್ನುವವರೆಷ್ಟು ಮಂದಿ? ಕನ್ನಡ ವರ್ಣಮಾಲೆಯನ್ನು ಅಳಿಸಬೇಕೋ ಅಥವಾ ಉಳಿಸಿ, ಬೆಳೆಸಬೇಕೋ ಎಂಬುದು ನಮ್ಮ ನಿಮ್ಮ ವಿಚಾರಕ್ಕೆ ಬಿಟ್ಟ ವಿಷಯ. "ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!

ಅನುಲೇಖ: ಇಲ್ಲಿ ನಾನು ಬರೆದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಲೇಖನದ ಹಿಂದೆ ಯಾರಿಗೂ ನೋವುಂಟು ಮಾಡುವ ಇರಾದೆಯಿಲ್ಲ. ಹಾಗೇನಾದರೂ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.

33 ಕಾಮೆಂಟ್‌ಗಳು:

Avinash Siddeshware ಹೇಳಿದರು...

ಹರೀಶ್...
ಈ ಕ್ಷಣದಲ್ಲಿ ನಿನ್ನ ಅನಿಸಿಕೆ ಸರಿ ಅನಿಸುತ್ತಿದೆ, ಆದರೂ ಒಂದು ನಿರ್ಧಾರಕ್ಕೆ ಬರಲು ಅನುಭವ ಸಾಲುತ್ತಿಲ್ಲ.
ಇದರ ಬಗ್ಗೆ ಆಳವಾಗಿ ಆಲೋಚಿಸುತ್ತಿದ್ದೇನೆ....

ವಿ.ರಾ.ಹೆ. ಹೇಳಿದರು...

ಹೌದು ಹರೀಶ್ , ಸುಮ್ಮನೇ ಸಂಸ್ಕೃತವನ್ನು ಹೊರಗಿಡಬೇಕು ಎಂದು ಹೇಳುವವರು ಅದರ practicality ಬಗ್ಗೆ ಚಿಂತಿಸುವುದಿಲ್ಲ. ಹಾಗೇ ಹೇಳುವವರಿಗೇ ತಮ್ಮ ಅಭಿಪ್ರಾಯವನ್ನು ಸಂಸ್ಕೃತ ಪದಗಳನ್ನು ಹೊರಗಿಟ್ಟು ಹೇಳಲು ಬರುವುದಿಲ್ಲ.

ಇನ್ನು ಇಂಗ್ಲೀಷಿನ ಹೆಚ್ಚು ಬಳಕೆಯ ಉದಾಹರಣೆ ಕೊಡುವಾಗ ಅದಕ್ಕೆ ಕಾರಣ ಜಗತ್ತಿನ ದೇಶಗಳಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಮತ್ತು ಅಮೆರಿಕಾದ ಪ್ರಭಾವ ಎಂಬುದು ತಿಳಿಯುವುದಿಲ್ಲ ಅವರಿಗೆ. ಸುಮ್ಮನೇ ಕಡಿಮೆ ಅಕ್ಷರ ಅದಕ್ಕೇ ಸುಲಭ, ಹೆಚ್ಚು ಬಳಕೆ ಎನ್ನುವ ಬಾಲಿಶ ಕಾರಣ ನೀಡುತ್ತಾರೆ.

ನಿಮ್ಮ ಈ ಪೋಸ್ಟನ್ನು ಸಂಪದ ದಲ್ಲಿ ಹಾಕಿ ನೋಡಿ ಒಳ್ಳೊಳ್ಳೇ ಪ್ರತಿಕ್ರಿಯೆಗಳು ಸಿಗಬಹುದು ;)

Harisha - ಹರೀಶ ಹೇಳಿದರು...

ಅವಿನಾಶ್, ಅನುಭವ ಸಾಲದು ಎಂಬ ನಿನ್ನ ವಿನಯದ ಮಾತೇ ನಿನ್ನ ಪ್ರೌಢಿಮೆಯನ್ನು ಸೂಚಿಸುತ್ತದೆ. ನಿಧಾನವಾಗಿ ಯೋಚಿಸು. ಇದು ಇಂದೇ ಬಗೆ ಹರಿಯುವ ವಿವಾದವಲ್ಲ...

ವಿಕಾಸ್, ನೀವು ಹೇಳಿದ ಬ್ರಿಟಿಷ್ ಚಕ್ರಾಧಿಪತ್ಯದ ಮಾತು ಅಕ್ಷರಶಃ ಸತ್ಯ. ಅವರಿಲ್ಲದಿದ್ದಿದ್ದರೆ ಇಂಗ್ಲಿಷ್ ಕೂಡ ಒಂದು ಪ್ರಾದೇಶಿಕ ಭಾಷೆಯಾಗಿರುತ್ತಿತ್ತೇನೋ. ನಿಮ್ಮ ವಿಚಾರಲಹರಿಯೂ ನನ್ನಂತೆಯೇ ಇದೆ ಎಂದು ತಿಳಿದು ಸಂತೋಷವಾಗಿದೆ. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

Sree ಹೇಳಿದರು...

ಚೆನ್ನಾಗ್ ಬರೆದಿದ್ದೀರಾ ಹರೀಶ್, ವಿಷಯದ ಬಗ್ಗೆ ಸಾಕಷ್ಟು ಚಿಂತನೆ ಮಾಡಿ ಬರೆದಿರೋದು ಮೆಚ್ಚೋ ವಿಷ್ಯ! ನೀವು ಹೇಳ್ತಿರೋದು ಸರಿ ಅಂತ ನನಗೂ ಅನ್ನಿಸುತ್ತೆ. ಬೇರೆ ಭಾಷೆಯ ಪದಗಳನ್ನೆಲ್ಲಾ ಕಿತ್ತು ಹಾಕಿ ಭಾಷೆಯನ್ನ ರಿವೈಂಡ್ ಮಾಡೋ ಪ್ರಯತ್ನ ಎಷ್ಟು ಸರಿ ಅಂತ ನನಗೆ ಗೊತ್ತಿಲ್ಲ! ಈ ಬಗ್ಗೆ ಕೀ ರಂ ರವರು ಹೇಳಿದ ಶಂಕರ ಭಟ್ಟರ ಪುಸ್ತಕದ ಬಗ್ಗೆ ಕೆಂಡಸಂಪಿಗೆಯಲ್ಲಿ ಬಂದಿದೆ ನೋಡಿ: http://www.kendasampige.com/preview/?p=809
ಅಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳೋದರಿಂದ ಒಂದು ಆರೋಗ್ಯಪೂರ್ಣ ಚರ್ಚೆ ಆಗಬಹುದು ಅನ್ನಿಸುತ್ತೆ

Harisha - ಹರೀಶ ಹೇಳಿದರು...

ಶ್ರೀ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಸಲಹೆಯಂತೆ ಕೆಂಡಸಂಪಿಗೆಯಲ್ಲಿ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಏನಾಗುತ್ತೋ ನೋಡೋಣ... :)

ವಿಕಾಸ್, ಸಂಪದಕ್ಕೆ ಈ ಬಾರಿ ಬೇಡ... ವಿಷಯದ ಬಗ್ಗೆ ಇನ್ನೂ ಆಳವಾಗಿ ವಿಚಾರ ಮಾಡಿ ಇನ್ನಾವಾಗಲಾದರೂ ಅಲ್ಲಿ ಹಾಕುತ್ತೇನೆ..

sunaath ಹೇಳಿದರು...

ಹರೀಶ,
ನಿಮ್ಮ ಲೇಖನ ಓದಿದ ಬಳಿಕ ಕನ್ನಡವನ್ನು ಹಾಳು ಮಾಡಲು ಎಂಥಾ concerted efforts ನಡೀತಾ ಇವೆ ಅನ್ನೋದು ಗೊತ್ತಾಯ್ತು.ಇದನ್ನು ವಿರೋಧಿಸುವದು ಅತಿ ಜರೂರಿನ ಕೆಲಸ.

ಸುಧೇಶ್ ಶೆಟ್ಟಿ ಹೇಳಿದರು...

ಚಿ೦ತೆ ಮತ್ತು ಚಿ೦ತನೆಗೊಳಪಡಿಸಿದ ಬರಹ.
ಕನ್ನಡ ಎಷ್ಟು ಚೆನ್ನಾಗಿ ಗೊತ್ತಿದೆ ಅ೦ದುಕೊ೦ಡರೂ, ಶುದ್ಧಕನ್ನಡ ಸರಿಯಾಗಿ ಗೊತ್ತೇ ಇಲ್ಲ ಅಲ್ವಾ?

ಸಂದೀಪ್ ಕಾಮತ್ ಹೇಳಿದರು...

ಕಾಲ ಕಾಲಕ್ಕೆ ಜನರು ಬದಲಾದಂತೆ ಭಾಷೆಯೂ ಬದಲಾಗುತ್ತಾ ಹೋಗುತ್ತೆ.ಇಲ್ಲಾ ಅಂದ್ರೆ ನಾವೂ ಈಗ "ಗಂಭೀರೆಯೆಂಬೊಳ್ ಬಿರ್ದಿ " ಅಂತ ಹಳೆಗನ್ನಡ ಮಾತಾಡ್ಕೊಂಡಿರ್ಬೇಕಾಗಿತ್ತು.

ನನ್ನ ಮಾತೃ ಭಾಷೆ ಕೊಂಕಣಿ ಅದಕ್ಕೆ ಯಾವುದೇ ಲಿಪಿ ಇಲ್ಲ ಆದ್ರೂ ಲಕ್ಷಾಂತರ ಜನ ಮಾತಾಡ್ತಾರೆ ಅದನ್ನ.
ನನ್ನ ಊರ ಭಾಷೆ ತುಳು ಅದಕ್ಕೂ ಈಗ ಲಿಪಿ ಇಲ್ಲ ಆದ್ರೂ ಕೋಟ್ಯಾಂತರ ಜನ ಮಾತಾಡ್ತಾರೆ ಅದನ್ನ!

ಕನ್ನಡ ವರ್ಣಮಾಲೆಯಲ್ಲಿ ಕತ್ತರಿಯಾಡಿಸೋದ್ರಿಂದ ಯಾವ ಪ್ರಯೋಜನಾನೂ ಇಲ್ಲ.

ಕುಕೂಊ.. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಕುಕೂಊ.. ಹೇಳಿದರು...

@ ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ..............

ನಿಮ್ಮ ಈ ಮಾತು ದಿಟ, ದೇವರೇ ಬಲ್ಲ. ಅದೇಗೆ ಕನ್ನಡ ಮಂದಿಗೆ ಅಚ್ಚಕನ್ನಡ ಪದಗಳು, ಹಾರೈಕೆಗಳು ತಿಳಿಯುತ್ತವೆ? ಈ ಪರಿ ಸಕ್ಕ ಇಂಬ್ಲೀಚ್ ಕನ್ನಡದ ಮೇಲೆ ಸವಾರಿ ಮಾಡಿರುವಾಗ ಎಲ್ಲಾದರು ಉಂಟೇ? ಕಲಿಮನೆ (ಶಾಲೆ), ಹಿರಿಕಲಿಮನೆಯ (ಕಾಲೇಜು) ಹುಡುಗರಲ್ಲಿ ಹಾಯ್, ಬಾಯ್, ಸ್ವೀಟಿ, ರಿಂಕಿ, ಪಿಂಕಿ, ರಿಕ್ಕಿ, ಸನ್ನಿ, ಗುಡ್ ಡೇ, ನೈಸ್ ಡೇ, ಆಡೇ, ಈಡೆ, ವಿಷ್, ಡ್ಯಾಡಿ, ಮಮ್ಮಿ, ಇನ್ನೇನೋ ವಕ್ಕರಸಿಕೊಂಡಿವೆ. ಕನ್ನಡ ಅಂದರೆ ಇವರಿಗೆಲ್ಲ ಮಾರುದ್ದ, ಕೀಳು.

ಇನ್ನು ಟೀವ್ಹಿಯಲ್ಲಿ ಇತರೆ ಬಾನುಲಿಗಳಲ್ಲಿ ಕೂಡ ಇದೇ ಗೋಳು. ಯಾವುದೇ ಕನ್ನಡ ಪತ್ರಿಕೆ ತೆಗೆದು ನೊಡಿದರೂ ಕಾಣುವುದು ಸಕ್ಕದ ಹೊರೆಗಳು. ಶುಭಾಶಯ, ಅಭಿನಂದನೆಗಳು ಮುಂತಾಗಿ. ಇನ್ನು ಕರೆಯೋಲೆಗಳಲ್ಲೂ ಸಕ್ಕದ ಒರೆಗಳು ಸುಳಿದು ಕನ್ನಡದ ಉರುಳಾಗಿವೆ. ಇನ್ನೇಗೆ ತಿಳಿಯಬೇಕು ನಮ್ಮಂತ ಕೋಟಿ ಕೋಟಿ ಹೈಕ್ಲಿಗೆ ಕನ್ನಡದಲ್ಲೂ ಹಾರೈಕೆ ತಿಳಿಸುವ ಒರೆಗಳಿವೆ ಎಂದು?? ಯಾರು ತಿಳಿಸಬೇಕು? ಕಲಿಮನೆಯಲ್ಲಿ ಕಲಿಸುತ್ತಿಲ್ಲ. ಪತ್ರಿಕೆಯಲ್ಲಿ ಇಂತಹ ಒರೆಗಳು ಬಳಕೆಯಾಗುತ್ತಿಲ್ಲ.ಇಂತಹ ಹೊತ್ತಲ್ಲಿ ನಲ್ವಗಲು, ಚಂಮೂಡು, ಚಂಬೆಳಗು, ಬಲ್ವಗಲು ಅಂತ ಹೇಳಿದರೆ ನಮ್ಮಪ್ಪನಾಣೆಯಾಗು ಯಾರಿಗು ತಿಳಿಯುವುದಿಲ್ಲ.

ಜೊತೆಗೆ ನಿಮ್ಮಂತ ಸಕ್ಕವನನ್ನು ಓಲೈಸುವ ಹಿಂಡು. ಸಕ್ಕವನ್ನು ಇಂಬ್ಲೀಚನ್ನು ಪಾವನ ತೀರ್ಥವೆಂಬತೆ ಆಡುವ ಇನ್ನೊಂದು ತಿಳಿಗೇಡಿ ಬಳಗ. ಇಷ್ಟೇ ಸಾಕಲ್ಲ ಕನ್ನಡದ ಚಟ್ಟ ಕಟ್ಟಿ ಸಿದಿಗೆ ಏರಿಸಲು..!! ಅದಕ್ಕೆ ಹರಿಶ, ನಾನೊಂದು ಹರಕೆ ಕಟ್ಟಿಕೊಂಡಿರುವೆ. ಎಲ್ಲರಿಗೂ ಕನ್ನಡದಲ್ಲೇ ಹಾರೈಕೆ ಮಾಡಬೇಕೆಂಬ ದಿಟ ಹರಿಕೆ. ಈ ತರನಾದರು ಮರೆಗು ಮೂಲೆಗುಂಪಾಗುತ್ತಿರುವ ಚಂದದ ಕನ್ನಡ ಒರೆಗಳನ್ನು ನನ್ನ ಬರಹದ ಮೂಲಕವಾದರು ಬೇರೆಯವರಿಗೆ ಗೊತ್ತಾಗುವಂತೆ ಮಾಡೋಣ ಅನ್ನುವ ಹೂಣಿಕೆತೊಟ್ಟೆ. ನಾನು ಕನ್ನಡದಲ್ಲಿ ಹಾರೈಕೆ ಮೊದಲು ಮಾಡಿದಾಗಿಂದ ಆದ ಒಂದೆರಡು ಸಣ್ಣ ಸೆಳಕು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಮೊದಲನೆಯದು ಕನ್ನಡದಲ್ಲೇ ಕಗ್ಗ ಬರೆಯುವ ಡಿಟ ಹೂಣು ಮಾಡಿದೆ. ಅದರಂತೆ ಇಲ್ಲೋಂದು ಕಗ್ಗ ನಿಮಗೆ ಕಾಣಿಸುವೆ ನೋಡಿ.
** ಮುಂಜಾವು **

ಏರಿ ಬಂದನು ನೇಸರ
ಮೂಡಣದಿ ತರಹರ
ನಲ್ಲಿರುಳ ಸರಿಸುತ
ಬೆರಸುತ ಹೊಂಬೆಳಗು

ಕನಸುಗಳು ಮೆತ್ತಿಹ
ಕಂಗಳ ಮುಸುಕನು
ಸರಿಸಿ ನೋಡಲು
ತಿಂಗಳನು ಇನ್ನಿಲ್ಲ

ಉಲಿಯಿತು ಇಂಚರದಿ
ಹಕ್ಕಿಯ ಕೊರಳು
ಮಂಜಿನ ತುಂತುರು
ಚಲ್ಲಾಡುವ ಹೊತ್ತಲಿ

ಹೂವು ಅರಳಿತು ನಗುತ
ಇಂಪುಕಂಪನು ಚೆಲ್ಲುತ
ಮಸೆವ ತಂಗಾಳಿಯಲಿ
ಬೆರೆತು ಹರಡುತ ಸೊಂಪು

ಚಲ್ವಾಯಿತು ನೆಲವು
ಚೆಲ್ಲಾಡಿದ ಪೊಂಗದಿರ
ತೊಂಗಲ ಅಡಿಯೋಳ್
ತುಂಬಿಕೊಂಡು ಗೆಲುವನು

ಚಲ್ವಾದ ಹೊತ್ತಲ್ಲಿ
ಚಲ್ವಿಯ ನಿದ್ದೆಯಿಂದೆದ್ದ
ಮುದ್ದಾದ ಚಲ್ಲಮುಖವ
ಎನಗೆ ಕಾಣುವಾ ಹುರುಪು

ಕಾಣಲಾರೆನು ಕಾದು
ತಳಮಳದಿ ಕಂಗೆಟ್ಟರು
ದೂರದೂರಲ್ಲಿ ಇರುವ
ಅವಳ ಚೆಲುವ ಮೊಗವನು

ಜಾಣ್ವಕ್ಕಿಯೆ ಕೇಳು
ತೊದಲಾಡುತ ಪಿಸುಮಾತಲಿ
ಹೋಗಿ ಪೇಳವಳಿಗೆ
ಕಾಣಲವಳನು ಹಂಬಲಿಸುವ
ಎನ್ನೆದೆಯ ಹೊಲೆಪಾಡನು

ಅಂದಿನಿಂದ ಇಂದಿನವರೆಗೆ ಅಚ್ಚಕನ್ನಡದಲ್ಲೇ ಕಗ್ಗಗಳನ್ನು ಬರೆದೆ. ಮುಂದೆ ಬರೆಯುವೆ. ಕನ್ನಡಡದಲ್ಲೇ ಬರೆಯಲು ಮೊದಲ್ಗೊಂಡಾಗ ಕನ್ನಡ ಒರೆಗಳು ಇಲ್ಲವೇನೋ ಅನ್ನುವ ಅರೆತಿಳುವಳಿಗೆ ಇತ್ತು. ಆದರೆ ಒಳಹೊಕ್ಕು ನೋಡಿತಾಗ ದುಂಡು ಮಲ್ಲಿಗೆಯ ಕನ್ನಡದ ಕಂಪು ನನಗೆ ಸೋಕಿತು. ಇದಕ್ಕು ಮೊದಲು ನಾ ಬರೆಗ ತುಂಬಾ ಕಗ್ಗಗಳಲ್ಲಿ ಸಕ್ಕದ ಒರೆ ತುರಿಕಿದ್ದೇನೆ. ಅದು ಕನ್ನಡದ ಬಗ್ಗೆ ನನಗಿದ್ದ ಅರೆತಿಳುವಳಿಕೆ. ಇಂದು ಆ ದಡ್ಡತನ ದೂರಾಗಿದೆ. ಕನ್ನಡದ ಪದ ಹುಡಿಕಿ ಬಳಕೆಗೆ ತರುವುದು ಇನ್ನುಮೇಲಿನ ಕೆಲಸ.

ಎರಡೆನೆಯದುದೇನಪ್ಪ ಅಂದ್ರೆ ಗಣೇಶನ ಹಬ್ಬದ ದಿನ ಎಲ್ಲರಿಗು ಅಚ್ಚ ಕನ್ನಡದಲ್ಲಿ ಹಾರೈಸಿದೆ. ಹೇಗೆ? ಇಗೋ ಈಗೆ " ನಿಮ್ಮೆಲರಿಗೂ ಗಣೇಶನ ಹಬ್ಬದ ನಲಿವಾರೈಕೆಗಳು"(ಶುಭಾಶಯಗಳು). ನಾನು ತಿಳಿಸಿದ ಎಲ್ಲರಿಗೂ ಇದು ತಿಳಿತು. ಅದೇ ರೀತಿ ಗುಡ್ ಮಾರ್ನಿಂಗ್/ ಶುಭೋದಯಕ್ಕೆ ಬದಲಿಗೆ ನಲ್ಬೆಳಗು, ನಲ್ವೆಳಗು, ಚೆಂಬಗಲು, ಚೆಂಬೆಳಗು, ಚೆಮ್ಮೂಡು ಅಂತಲೆ ಹೇಳ್ತಿನಿ, ಚಿಕ್ಕೋಲೆ (ಎಸ್, ಎಮ್, ಎಸ್) ಯಲ್ಲೂ ಅದೇ ನುಡಿಗಳನ್ನು ಬರಿತೀನಿ. ಮೊದಲೊಂದು ದಿನ ಎಲ್ಲರೂ ಏನಿದು ಎಂದು ಕೇಳಿದರು. ಬಿಡಿಸಿ ಹೇಳಿದೆ. ಎಲ್ಲರೂ ನನ್ನಂತೆ ಮೊದಲು ಮಾಡಿದರು. ಇವತ್ತು ನನ್ನ ಗೆಳೆಯ ಬಳಗದಲ್ಲಿ ನೂರಾರು ಮಂದಿ ಇದೇ ಒರೆಗಳನ್ನು ಬಳಸುತ್ತೇವೆ. ಒಂದಕ್ಕೆ ಎರಡಾಗಿ ಎರಡಕ್ಕೆ ನಲ್ಕಾಗಿ ನೂರು ಸಾವಿರಾಗಿ ಕೋಟಿ ಮುಟ್ಟಬಹುದಲ್ಲವೆ? ಆದರೆ ಮೊದಲ್ಗೊಳ್ಳುವವರು ಯಾರು? ನಾವೆ ತಾನೆ? ನಮ್ಮಿಂದನೇ ಮೊದಲುಗೊಳ್ಳಬೇಕು ತಾನೆ?

ಆದರೆ ನಿಮ್ಮದು ಕೀಳರಿಮೆಯೋ, ಅಡಿಯಾಳುತನವೋ(ಗುಲಾಮಿ) ಇಲ್ಲವೆ ಅರೆತಿಳುವಳಿಕೆಯೋ ನಿಮ್ಮ ಈ ಮಾತನ್ನೇ ನೋಡಿದರೆ
"ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!'

ಶುಭದಿನ ಹಾಳುಗೆಡವು ಅಂತ ಯಾರೇಳಿದರು? ಶುಭದಿನ ಹಾಳಾಗುತ್ತಿದೆ ಎನ್ನುವುದು ನಿಮ್ಮ ತಳವೆಳಗು. ಶುಭದಿನಕ್ಕೆ "ಸುಬದಿನ" ಅಂತ ಬರೆಯೋದು ಯಾಕೆ? ನಲ್ವಗಲು, ಚೆಂಬಗಲು, ನಲ್ನಾಳು, ಚನ್ನಾಳು ಬರೆಯಿರಿ ಅಚ್ಚಕನ್ನಡದಲ್ಲಿ ಸೊಗಸಾದ, ಚೆಲುವಾದ ಚಂದದ ಒರೆ ಇವೆ. ನಾನು ನಿಮಗೆ ಕೀಳರಿಮೆ, ಅಡಿಯಾಳುತನ, ಅರೆ ತಿಳುವಳಿಕೆ ಎಲ್ಲದು ಇದೆ ಅಂತ ಹೇಳ್ತೀನಿ. "ಶುಭದಿನ" ಸುಂದರ ಅನ್ನೋದು ನಿಮ್ಮ ಅರೆತಿಳುವಳಿಕೆ ತಿಳಿಸುತ್ತದೆ. ಯಾಕೆಂದರೆ ಸಕ್ಕದಲ್ಲಿ ಶುಭದಿನ ಎಷ್ಟು ಚಂದವೋ ಅಚ್ಚಕನ್ನಡದಲ್ಲಿ ನಲ್ವಗಲು, ಚೆಂಬಗಲು, ನಲ್ನಾಳು, ಚನ್ನಾಳು ಅಷ್ಟೇ ಚಂದ. ಇದು ನಿಮಗಿರುವ ಸಕ್ಕದ ಮೇಲಿನ ಒಲವನ್ನು ತಿಳಿಸುತ್ತೆ. ಚಂದ ಚೆಲುವಿನ ಮಾತೆ ಇಲ್ಲಿ ಮೂಡುವುದಿಲ್ಲ.
ಹೊತ್ತಿಗೆ ಸರಿಯಾಗಿ ಮಾತಿನ ಸಾಲಲ್ಲಿ ಯಾವುದೇ ನುಡಿ ಸೇರಿಸಿದರೂ ಅದರ ಒಳತಿಳಿವು ಎಲ್ಲರಿಗೂ ದಿಟವಾಗಿ ಗೊತ್ತಾಗುತ್ತೆ. ಬಿಡಿಯಾಗಿ ಒರೆ ಬರೆದರೆ ತಿಳಿಯುವುದಕ್ಕೆ ತೊಂದರೆ ಆಗುತ್ತೆ. ಹೊಸದಾಗಿ "ನಲ್ಬೆಳಗು" ಅಂತ ಬರಿ ಒರೆಯನ್ನು ಬರೆದರೆ ಬೇರೆಯವರಿಗೆ ತಿಳಿಯೋದಿಲ್ಲ. ಅದೇ "ನಲ್ಬೆಳಗು" ಒರೆಯನ್ನು "ನಲಿವಿರುಳಿನ ಕನಸಿನಿಂದೆದ್ದ ನಿನಗೆ ನಲ್ಬೆಳಗು" ಎಂಬ ಮಾತಿನಲ್ಲಿ ಹೇಳಿದರೆ ದಿಟವಾಗಿ ಎಲ್ಲರಿಗೂ ನಲ್ಬೆಳಗು ಅನ್ನುವುದು ಶುಭೋದಯ ಅಂತ ತಿಳಿಯುತ್ತೆ. ಯಾಕೆಂದರೆ ಮಾತು (ವಾಕ್ಯ) ಕೊನೆಗೊಂಡಿದೆ. ಹೊತ್ತಿಗೆ ಸರಿಯಾಗಿ ಮಾತುಗಳಲ್ಲಿ ಬಳಸಿದ ಹೊಸ ಒರೆ ಬೇರೆಯವರಿಗೆ ತಂತಾನೆ ತಿಳಿಯುತ್ತೆ. ನಮ್ಮದು ಎನ್ನುವ ಹೆಮ್ಮ ನಮಗಿರಬೇಕು. ನನ್ನತನ ನಮ್ಮತನ ತೋರಿಸುವ ಹಂಬಲ, ತುಡಿತ ಬಯಕೆ ಇರಬೇಕು. ನನ್ನದು ಬೇರೆಯವರಿಗಿಂತ ಕೀಳಲ್ಲ ಹಾಗು ನಮ್ಮತನವನ್ನು ತೋರ್ಪಡಿಸಿಕೊಳ್ಳುವ ಎದೆಗಾರಿಕೆ ಎದೆಯಾಳದಿಂದ ಬರಬೇಕು. ಆಗ ನಿಮಗಿರುವ ಈ ಕೀಳರಿಮೆ ದಿಟವಾಗಿ ಇರುತ್ತಿರಲಿಲ್ಲ. ನುಡಿಯಲ್ಲಿ ಮೇಲು ಕೀಳೆಂಬುದಿಲ್ಲ. ನಿಮಗೆ ನೆನಪಿರಲಿ ಶುಭದಿನದಂತೆ ನಲ್ವಗಲು ಕೂಡ ಚಂದದ ಒರೆ. ಸಕ್ಕ, ಇಂಬ್ಲೀಚ್ ಬಳಸುವವರಿಗೆ ಇದು ಕಿವಿಮಾತಾಗಿರಲಿ. ಇದರ ಒಳಅರಿವು ತಿಳಿಗೊಳ್ಳದಿದ್ದರೆ ಕನ್ನಡದ ಒರೆಗಳಿಗೆ ಚಟ್ಟ ಕಟ್ಟಿ ಸಿದಿಗೆಗೆ ಏರಿಸಲು ಬೆಂಕಿ ಕಡ್ಡಿಯೊಂದಿಗೆ ರಾಮನಾಮ ಸತ್ಯ ಹೈ ಎಂತೇಳುತ ಸುಡುಗಾಡಿಗೆ ಬನ್ನಿ.

ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

"ಸುಲಿದ ಬಾಳೆಹಣ್ಣಿನಂತ ಅಚ್ಚಕನ್ನಡವನ್ನು ಕೊಚ್ಚೆಮಾಡಬೇಡಿ"

Harisha - ಹರೀಶ ಹೇಳಿದರು...

@ಸುನಾಥ್, ಹೌದು. ಯಾರು ಏನೇ ಕೂಗಿಕೊಳ್ಳಲಿ, ನಾನಂತೂ ಮಹಾಪ್ರಾಣ ಬೇಕು ಎಂದೇ ಹೇಳುವವನು.

@ಸುಧೇಶ್, ನಾವು ತಿಳಿದುಕೊಂಡಿರುವುದು ಬಹಳ ಕಡಿಮೆ.. ಆದಷ್ಟೂ ಕನ್ನಡ ಪದಗಳನ್ನೇ ಬಳಸಿ, ಸಾಧ್ಯವಾದರೆ ಬಳಕೆಯಲ್ಲಿಲ್ಲದ ಪದಗಳನ್ನೂ ಬಳಕೆಗೆ ತರುವ ಕೆಲಸ ಆಗಬೇಕಾಗಿದೆ.

@ಸಂದೀಪ್, ಡಾರ್ವಿನ್ ವಿಕಾಸವಾದ ಮಂಡಿಸಿದ, ಈಗ ಕೆಲವರು ಅವಕಾಶವಾದ ಮಾಡುತ್ತಿದ್ದಾರೆ. ನನ್ನದೂ ನಿಮ್ಮ ಅಭಿಪ್ರಾಯವೇ.

Harisha - ಹರೀಶ ಹೇಳಿದರು...

@ಕುಮಾರಸ್ವಾಮಿ, ನಿಮ್ಮ ನೇರನುಡಿಗೆ ನನ್ನಿ!

ನಾನು ಮಹಾಪ್ರಾಣ ಅಕ್ಷರಗಳನ್ನು ವರ್ಣಮಾಲೆಯಿಂದ ತೆಗೆಯುವುದರ ವಿರುದ್ಧ ಮಾತನಾಡುತ್ತಿದ್ದೇನೆಯೇ ಹೊರತು ಕನ್ನಡ ಪದಗಳನ್ನು ಉಪಯೋಗಿಸಬಾರದು, ಸಂಸ್ಕೃತ ಪದಗಳನ್ನೇ ಉಪಯೋಗಿಸಬೇಕು ಎಂದಲ್ಲ. ನನಗೆ ಕನ್ನಡದ ಬಗ್ಗೆ ಸಂಸ್ಕೃತದಷ್ಟೇ ಗೌರವವಿದೆ, ಅದಕ್ಕಿಂತ ಹೆಚ್ಚು ಅಕ್ಕರೆಯಿದೆ. ಇಲ್ಲದೆ ಹೋಗಿದ್ದರೆ ಕನ್ನಡ ವರ್ಣಮಾಲೆಯ ಬಗ್ಗೆ ಕಾಳಜಿ ತೋರಿ ಇಲ್ಲಿ ಬರೆಯುವ ಅವಶ್ಯಕತೆ ನನಗೇನಿತ್ತು?

ಅಚ್ಚ ಕನ್ನಡದಲ್ಲಿ ನೀವು ಬರೆದಿರುವ ಕವನವನ್ನೇ ತೆಗೆದುಕೊಳ್ಳಿ. ಅದರಲ್ಲಿ ಮಹಾಪ್ರಾಣಗಳಿಲ್ಲ ಎಂಬುದು ನಿಜ. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬೇರೆ ಭಾಷೆಗಳ ಪದಗಳನ್ನು ಬಳಸದೆ ಲೇಖನ, ಕಥೆ, ಕವನ ಬರೆಯಿರಿ ಎಂದರೆ ಎಷ್ಟು ಜನ ಮುಂದೆ ಬರುತ್ತಾರೆ? ನಿಮ್ಮಂತೆ ಕನ್ನಡದ ಪದಗಳನ್ನೇ ಹುಡುಕಿ ಬರೆಯುವಷ್ಟು ತಾಳ್ಮೆ ಯಾರಿಗಿದೆ?

"ಶುಭದಿನ" ಎಂಬ ಪದ ಮಹಾಪ್ರಾಣಗಳಿಲ್ಲದಾದಾಗ "ಸುಬದಿನ" ಎಂದಾಗುತ್ತದೆ ತಾನೆ? ಅದರ ಬದಲು "ನಲ್ನಾಳು" ಎಂದು ಬರೆಯಲಿ, ಹೇಳಲಿ; ಬೇಡ ಎಂದವರು ಯಾರು? ಬಹಳಷ್ಟು ಜನಕ್ಕೆ ತಿಳಿದಿಲ್ಲ ಎನ್ನುವುದನ್ನು ಬಿಟ್ಟರೆ ನಲ್ನಾಳು ಕೂಡ ಶುಭದಿನ ಎಂಬ ಪದದಷ್ಟೇ ಚೆಂದ. ನಾವು ಯಾವುದೇ ಒಂದು ಭಾಷೆಯಿಂದ (ಇಲ್ಲಿ ಸಂಸ್ಕೃತದಿಂದ) ಪದ ತೆಗೆದುಕೊಳ್ಳುತ್ತೇವೆ ಎಂದಾದರೆ ಅದರ ಬಗ್ಗೆ ಕೃತಜ್ಞತೆಯೂ ಇರಬೇಕು ತಾನೆ? ಕೆಲವರು ಕನ್ನಡವನ್ನು ಸರಿಪಡಿಸುತ್ತೇವೆ ಎಂದು ಕೈ ಕಾಲು ಕತ್ತರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರಿಗೆ ಅಷ್ಟು ಆಸಕ್ತಿಯಿದ್ದರೆ ಕನ್ನಡ ಪದಗಳನ್ನು ಬಿಟ್ಟು ಬೇರೆ ಭಾಷೆಯ ಪದಗಳನ್ನು ಉಪಯೋಗಿಸುವುದಿಲ್ಲ ನಿರ್ಧರಿಸಲಿ, ಅದರಂತೆ ನಡೆದುಕೊಳ್ಳಲಿ, ಬೇಡ ಎನ್ನುವವರು ಯಾರು?. ಅದನ್ನು ಬಿಟ್ಟು ಕನ್ನಡದಲ್ಲಿ ಮಹಾಪ್ರಾಣಗಳಿಲ್ಲ ಎಂದು ಅದನ್ನು ತೆಗೆಯಬೇಕು ಎನ್ನುತ್ತಾ "ನಾನು ಬಾಸೆ ಅಂತೀನಿ ನಿಮಗೆ ಅಶ್ಟು ಅರ್ತ ಆಗಲ್ವಾ" ಎನ್ನುವುದೇಕೆ? ಮಹಾಪ್ರಾಣಗಳಿಲ್ಲದ "ನುಡಿ" ಅವರಿಗೆ ತಿಳಿದಿಲ್ಲವೇ?

ಜನ ಒಂದೇ ಪದವನ್ನು ಹತ್ತಾರು ರೀತಿ ಉಚ್ಚರಿಸಬಹುದು. ಹಾಗಂತ ಅವರು ಏನು ಹೇಳುತ್ತಾರೋ ಅದನ್ನೇ ಮಾನಕವಾಗಿ ತೆಗೆದುಕೊಳ್ಳುವುದು ತಪ್ಪಲ್ಲವೇ? ಇವತ್ತು "ಅ" ಮತ್ತು "ಹ" ಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ (ಇಲ್ಲಿ ನೋಡಿ). ಅವರೇನು ಹೇಳುತ್ತಿದ್ದಾರೆ ಎಂದು ನಮಗೆ ತಿಳಿಯುತ್ತಿದೆಯೋ ಇಲ್ಲವೊ ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಇದನ್ನೇ ಕಾರಣವಾಗಿ ಇಟ್ಟುಕೊಂಡು "ಹೇನು" ಅಂದರೆ "ಏನು", "ಹಾದರ" ಎಂದರೆ "ಆದರ" ಎಂಬ ಅರ್ಥ ಹೇಳುವುದು ಸಮಂಜಸವೇ?

ಯೋಚಿಸಿ, ಉತ್ತರಿಸಿ :-)

ಅನಾಮಧೇಯ ಹೇಳಿದರು...

ಅಲ್ಲೊಬ್ಬ ನನ್ನ ಗೆಳೆಯ ನಿನಗಾಗಿ ಸಲ್ಲಾಪದಲ್ಲಿ ಬರೆದಿದ್ದು ನೋಡಪ್ಪ ಹರೀಶಪ್ಪ,

ಹರೀಶರು ಹೇಳಿದ್ದು,
>>"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.

ನೋಡಿ, ನೀವು ಮತ್ತೆ ಬೇಗ ತೀರ್ಮಾನ ತೊಗೊಳ್ತಾ ಇದ್ದೀರಾ. ನಾನು ನಿಮ್ಮ ಬತ್ತಳಿಕೆಯ ಒಂದು ಬಳಕೆಯನ್ನೇ ಉದಾಹರಣೆಯಾಗಿ ತೊಗೊಂಡು ಮೂರು ಪ್ರಶ್ನೆಯನ್ನು ಕೇಳ್ತೀನಿ. ಇದಕ್ಕೆ ಪ್ರಾಮಾಣಿಕ ಉತ್ತರ ಕೊಡಿ. ಭಾವುಕವಾಗಿ, ಕನ್ನಡದಿಂದ ಏನೋ ಕಳ್ದೋಯ್ತು ಎಂಬ ಉದ್ವೇಗದಿಂದ ಉತ್ತರಿಸಬೇಡಿ, ದಯವಿಟ್ಟು.

೧. ಈಗ ನೋಡಿ ನೀವು, ಕುರ್ಚಿಯನ್ನು "ಖುರ್ಸಿ" ಅಂತೀರೋ "ಕುರ್ಚಿ" ಅಂತೀರೋ ? Maza ಎನ್ನುವುದನ್ನು "ಮಜ" ಅಂತ ನಾವು ಬಳಸಲ್ವೇ ? ಇಂತಿರುವಾಗ, ಭಾಷೆಯನ್ನು "ಬಾಶೆ" ಅಂತ ಬರೆಯಬೇಡಿ, ಅಂತ ಹೇಳೋಕ್ಕೆ ನಾವು ನೀವು ಯಾರು ? ಭಾಷೆಯನ್ನು ಭಾಷೆಯಾಗಿಯೇ ಹೇಳುಬೇಕು ಅಂತ ಇದ್ದರೆ, ಕುರ್ಚಿಯನ್ನು ಖುರ್ಸಿಯಂತಲೇ ಹೇಳೋಕ್ಕೆ ನೀವು ತಯಾರಾ ?. ಮತ್ತೊಮ್ಮೆ, ಉದ್ವೇಗ ಬೇಡ. ಯೋಚಿಸಿ ಉತ್ತರ ಕೊಡಿ.
೨. ನಿಮಗೆ "ಭಾಷೆ"ಯನ್ನು ಭಾಷೆ ಅಂತಲೇ ಬರೆಯಬೇಕು ಎನ್ನುವ ಮನಸ್ಥಿತಿಯಿದ್ದರೆ, ನಿಜವಾಗಿ ನೋಡಿದರೆ, "ಭಾಷಾ" ಎಂದು ಬರೆಯಿರಿ. ಸಂಸ್ಕೃತದ "ಭಾಷಾ"ವನ್ನು ಕನ್ನಡದಲ್ಲಿ "ಭಾಷೆ" ಅಂತ ಬರೆದು ಸಂಸ್ಕೃತವನ್ನು ಯಾಕೆ ಹಾಳುಮಾಡ್ತೀರಿ ಅಂತ ನಾನು ಕೇಳಿದರೆ ನಿಮ್ಮ ಉತ್ತರ ಏನು ?
೩. ಅಷ್ಟಕ್ಕೂ ಮಹಾಪ್ರಾಣಗಳು ಬೇಕು ಎನ್ನುವವರೂ ಕೂಡ "ಭಾಷೆ"ಯನ್ನು "ಭಾಷೆ" ಅಂತ ಉಚ್ಚರಿಸಲ್ಲ, ಬದಲಾಗಿ "ಭಾಶೆ" ಅಂತಾರೆ. ನಿಮಗೆ ಶ, ಷಗಳ ನಡುವೆ ವ್ಯತ್ಯಾಸ ತಿಳಿದಿರಬಹುದು. ನಿಮಗೆ "ಭಾಷೆ" ಬೇಕು ಎಂದಾದರೆ, ಕಷ್ಟಪಟ್ಟಾದರೂ, "ಭಾಷೆ" ಅಂತ ನಾಲಗೆ ಹೊರಳಿಸಿ ಹೇಳಿ, ಮುಖ್ಯವಾಗಿ ನಿಮ್ಮ ಹತ್ತಿರದವರಿಂದ ಹೇಳಿಸಿ ನೋಡೋಣ. ಉದ್ವೇಗದಲ್ಲಿ "ನಾನು ಭಾಷೆ ಅಂತಾನೇ ಹೇಳ್ತೀನಿ, ಅದಕ್ಕೇನೀಗ" ಎನ್ನಬಹುದು. ಆದರೆ ಪ್ರಯತ್ನವಿಲ್ಲದೆ, ದಿನಗಟ್ಟಲೆಯಲ್ಲಿ ನಾವು, ನೀವು ಎಲ್ರೂ "ಶ"ವನ್ನೇ ಬಳಸೋದು.

ಕನ್ನಡದ ಸೊಗಡಿಗೆ ಹೊಂದುವಂತೆ ನಾವು (ಹಿಂದಿನ ಕನ್ನಡ ಕವಿಗಳು, ಈಗಿನ ಪಂಡಿತರೂ, ಎಲ್ಲರೂ) ಎಷ್ಟೋ ಸಂಸ್ಕೃತ ಪದಗಳನ್ನು, ಉರ್ದು ಪದಗಳನ್ನು ಒಗ್ಗಿಸಿಕೊಂಡಿದ್ದೇವೆ ? ಇಂತಿರುವಾಗ ನಮ್ಮದಲ್ಲದ ಪದಗಳನ್ನು ನಮ್ಮ ಸೊಗಡಿಗೆ ಹೊಂದಿಸಿಕೊಂಡು ಬರೆದವರನ್ನು ಕೀಳುಗಣ್ಣಿನಿಂದ ಏಕೆ ನೋಡಬೇಕು ? ಕನ್ನಡ ಪಂಡಿತರು ಕೂಡ ಬೇರೆ ಬೇರೆ ಕಡೆ ಎಷ್ಟೋ ಮಹಾಪ್ರಾಣಗಳನ್ನು ಉಲಿಯುತ್ತಿಲ್ಲ (ಖುರ್ಸಿ->ಕುರ್ಚಿ, ಒಂದು ಸಣ್ಣ ಉದಾಹರಣೆ)

"ದೇವೇಗೌಡರ ಆಸನ ..." ಮುಂತಾದ ಕುಹಕಗಳು ಶಾಸ್ತ್ರೀಯ ವಿಷಯದಲ್ಲಿ ಚರ್ಚಿತವಾಗುವುದು ಈ ಒಂದು ಚರ್ಚೆಯ ಘನತೆಗೆ ಅಪಮಾನ.

Harisha - ಹರೀಶ ಹೇಳಿದರು...

>> ಭಾಷೆಯನ್ನು "ಬಾಶೆ" ಅಂತ ಬರೆಯಬೇಡಿ, ಅಂತ ಹೇಳೋಕ್ಕೆ ನಾವು ನೀವು ಯಾರು ?

ನಾನು ಯಾರೂ ಅಲ್ಲ, ಒಬ್ಬ ಸಾಮಾನ್ಯ ಕನ್ನಡಿಗ. ಬಾಸೆ, ಭಾಸೆ, ಬಾಶೆ, ಭಾಶೆ, ಬಾಷೆ, ಭಾಷೆ - ಇದರಲ್ಲಿ ಯಾವುದು ಸರಿ ಎಂದರೆ ಏನೆನ್ನುತ್ತೀರಿ? ನಿಮ್ಮ ಪ್ರಕಾರ ಎಲ್ಲವೂ ಸರಿ. ಇನ್ನು ಮುಂದೆ ನಿಘಂಟಿನ ಅಗತ್ಯವೇ ಇರುವುದಿಲ್ಲ.

>> ಸಂಸ್ಕೃತದ "ಭಾಷಾ"ವನ್ನು ಕನ್ನಡದಲ್ಲಿ "ಭಾಷೆ" ಅಂತ ಬರೆದು ಸಂಸ್ಕೃತವನ್ನು ಯಾಕೆ ಹಾಳುಮಾಡ್ತೀರಿ ಅಂತ ನಾನು ಕೇಳಿದರೆ ನಿಮ್ಮ ಉತ್ತರ ಏನು ?

ಸಂಸ್ಕೃತದ ಎಲ್ಲ ಆಕಾರಾಂತ ಸ್ತ್ರೀಲಿಂಗ ಪದಗಳೂ ಕನ್ನಡದಲ್ಲಿ ಎ ಅಕ್ಷರದಿಂದ ಕೊನೆಗೊಳ್ಳುತ್ತವೆ. ಉದಾ: ಗಂಗೆ, ಯಮುನೆ, ಕೃಷ್ಣೆ, ಶ್ಯಾಮಲೆ, ಸುಧೆ...

>> ಆದರೆ ಪ್ರಯತ್ನವಿಲ್ಲದೆ, ದಿನಗಟ್ಟಲೆಯಲ್ಲಿ ನಾವು, ನೀವು ಎಲ್ರೂ "ಶ"ವನ್ನೇ ಬಳಸೋದು.

ಸರಿಯಾಗಿ ಕಲಿಸಿದರೆ ಸರಿಯಾಗಿ ಉಚ್ಚರಿಸಲು ಬರುತ್ತದೆ. ಚಿಕ್ಕವರಿದ್ದಾಗ ಕೆಲವರಿಗೆ "ರ" ಅಕ್ಷರ ಉಚ್ಚರಿಸಲು ಬರುವುದಿಲ್ಲ. "ಲ" ಎನ್ನುತ್ತಾರೆ. ಅಂಥ ಮಕ್ಕಳಿಗೆ ಸರಿಯಾದ ಉಚ್ಚಾರ ಕಲಿಸುತ್ತೀರೋ ಅಥವಾ ಭಾಷೆ ಬದಲಿಸುತ್ತೀರೋ?

ಭಾರತೀಯ ಭಾಷೆಗಳಲ್ಲಿ ವರ್ಣಮಾಲೆ ವೈಜ್ಞಾನಿಕವಾಗಿ ರೂಪಿಸಲ್ಪಟ್ಟಿದೆ. ಯಾವ ಯಾವ ಅಕ್ಷರ ಬಾಯಿಯ ಯಾವ ಭಾಗದಿಂದ ಹುಟ್ಟುತ್ತದೆಯೋ ಅದರ ಮೇಲೆ ಆಧರಿಸಿ ಅವುಗಳನ್ನು ವಿಂಗಡಿಸಲಾಗಿದೆ. ನಿಮಗೆ ತಿಳಿದಿರಬಹುದಾದಂತೆ ಸ-ದಾಂತ್ಯ (ಹಲ್ಲಿಗೆ ನಾಲಿಗೆ ತಾಗಿ ಹುಟ್ಟುತ್ತದೆ), ಶ-ತಾಲವ್ಯ (ಹಲ್ಲಿನ ಮೇಲ್ಭಾಗಕ್ಕೆ ನಾಲಿಗೆ ತಾಗಿ ಹುಟ್ಟುತ್ತದೆ), ಷ-ಮೂರ್ಧನ್ಯ (ಬಾಯಿಯ ಮೇಲ್ಭಾಗಕ್ಕೆ ನಾಲಿಗೆ ತಾಗಿ ಹುಟ್ಟುತ್ತದೆ). ಇದನ್ನು ಮನೆಯಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ತಿಳಿಸಿ ಹೇಳಿಕೊಟ್ಟರೆ ಹೇಳಲು ಬಂದೇ ಬರುತ್ತದೆ. ಅದೂ ಅಲ್ಲದೆ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವವರಂತೆ ಅಲ್ಪಪ್ರಾಣಗಳ ಬದಲು ಮಹಾಪ್ರಾಣಗಳನ್ನು ಬಳಸುವವರೂ ಕಡಿಮೆಯೇನಿಲ್ಲ. ವಿಧ್ಯಾರ್ಥಿ, ಭಂಧ ಎನ್ನುವವರು ಎಲ್ಲೆಡೆ ಇದ್ದಾರೆ. ಇವೆಲ್ಲಾ ಗಮನಿಸಿದರೆ ಮಹಾಪ್ರಾಣಗಳು ನಿಮಗಲ್ಲದಿದ್ದರೂ ಸರಿಯಾಗಿ ಉಚ್ಚರಿಸಲು ಬರುವವರಿಗಾದರೂ ಅಗತ್ಯವಿದೆ ಎಂದೆನಿಸುವುದಿಲ್ಲವೆ? ಕುಣಿಯಲು ಬಾರದೆ ನೆಲ ಡೊಂಕು ಎನ್ನುವುದು ಸಲ್ಲ.

ಕುಕೂಊ.. ಹೇಳಿದರು...

@@ ಹರೀಶ,

"ನನಗೆ ಕನ್ನಡದ ಬಗ್ಗೆ ಸಂಸ್ಕೃತದಷ್ಟೇ ಗೌರವವಿದೆ, ಅದಕ್ಕಿಂತ ಹೆಚ್ಚು ಅಕ್ಕರೆಯಿದೆ" ನಿಮ್ಮ ಈ ಮಾತಿನಿಂದ ನಿಮಗಿರುವ ಕನ್ನಡ ಒಲವು ಹೆಚ್ಚಿಗಿದೆ ಎಂದು ತಿಳಿದು ನನಗೆ ಗೆಲುವಾಯಿತು. ಆದರೆ ನಿಮಗೆ "ಸಕ್ಕ ಹೆಚ್ಚು ಕನ್ನಡ ಅಡಿ" ಎನ್ನುವ ಕೀಳರಿಮೆ ಇರುವುದು ನಿಮ್ಮೆಲ್ಲಾ ಬರಹದಿಂದ ನನಗ ತಿಳಿಯುತ್ತದೆ. ನಾನು ಈ ಜಗತ್ತಿನಲ್ಲಿರುವ ಯಾವ ನುಡಿಯನ್ನೂ ಕೀಳಾಗಿ ಕಾಣುವುದಿಲ್ಲ. ಬೇರಾವುದೇ ನುಡಿಯ ಬಗ್ಗೆ ನನಗೆ ಮೂದಲಿಕೆ, ಕೋಪ, ಸಿಟ್ಟು ನಂಜಿಲ್ಲ. ಈ ಮಾತನ್ನು ಮೊದಲಿಗೆ ನಿಚ್ಚಳವಾಗಿ ತಿಳಿಯಿರಿ. ಒಂದು ನುಡಿಯ ವ್ಯಾಕರಣ ಹಾಗು ನುಡಿಯ ಒಳರಚನೆಯ ಬಗ್ಗೆ ಬಿಡಿ ಬಿಡಿಯಾಗಿ ಬಿಡಿಸಿ ನೋಡಿದಾಗ ತಿಳಿಯುವುದೇನಪ್ಪ ಅಂದರೆ, ಎಲ್ಲಾ ನುಡಿಗೂ ತನ್ನದೇ ಆದ ವ್ಯಾಕರಣ ನಿಯಮ ಇದೆ.
ನಿಮ್ಮ ಈ ಮಾತನ್ನು ಒಪ್ಪಲಾಗುವುದಿಲ್ಲ,

"ಜನ ಒಂದೇ ಪದವನ್ನು ಹತ್ತಾರು ರೀತಿ ಉಚ್ಚರಿಸಬಹುದು. ಹಾಗಂತ ಅವರು ಏನು ಹೇಳುತ್ತಾರೋ ಅದನ್ನೇ ಮಾನಕವಾಗಿ ತೆಗೆದುಕೊಳ್ಳುವುದು ತಪ್ಪಲ್ಲವೇ?" ಹತ್ತಾರು ಜನರು ಹತ್ತಾರು ಬಗೆಯಲ್ಲಿ ಮಾತನಾಡುತ್ತಾರೆ. ಅಂತಹ ಮಾತುಗಳ ಬದಲಾವಣೆಯಲ್ಲಿ ಒಂದು ಕಟ್ಟಳೆಯ ಮೇಲೆ ಇದೆ. 'ಹ' ಕಳಚಿಕೊಂಡು 'ಅ' ಕಾರವಗಿದೆ. ಎಲ್ಲೂ 'ಇ' ಕಾರವಾಗಲಿ 'ಉ' ರಾವಾಗಲಿ ಸೇರಿ ದಿಕ್ಕು ದೆಸೆ ಇಲ್ಲದೆ ಬದಲಾಗಿಲ್ಲ. ಇದು ಒಂದು ಸರಿಯಾದ ಕಟ್ಟಳೆಯನ್ನು ಇಟ್ಟುಕೊಂಡು ಬದಲಾಗಿದೆ. ಇದಕ್ಕೆ ಇನ್ನೂ ಉದಾಹರಣೆ ಬೇಕೆಂದರೆ, ಮಸ್ಸೂರಿನ 'ಮನೆ' ದಾರವಾಡದಲ್ಲಿ 'ಮನಿ' ಆಗಿದೆ, ಇಲ್ಲಿ 'ಎ' ಕಾರಕ್ಕೆ 'ಇ' ಕಾರವಾಗಿ ಬದಲಾಗಿದೆ. ಇಂತಹುದೆ ಬದಲಾವಣೆ ಹಳಗನ್ನಡ ಹೊಸಗನ್ನಡದ ನಡುವೆ ನಡೆದಿದೆ. ಉದಾ: 'ಪಾಲು' 'ಹಾಲು' ಆಗಿ ಬದಲಾಗಿದೆ. ಇಲ್ಲಿ 'ಪ' ಬದಲಿ 'ಹ' ಬಂದಿದೆ. ಇಂತಹದೊಂದು ನಿಚ್ಚಳ ಕಟ್ಟಳೆಯ ಮೇಲೆ ನುಡಿ ಬದಲಾಗುತ್ತದೆ. ಇದು ನುಡಿಯಲ್ಲಿ ನಡದೇ ಇರುತ್ತದೆ. ಇದು ನುಡಿಯ ಜೀವಂತಿಕೆ ಅರಿವು.

ಇನ್ನು ಮಹಾಪ್ರಾಣದ ಬಗ್ಗೆ ಮಾತನಾಡುವುದಾದರೆ ನನ್ನನ್ನೆ ತೆಗೆದು ಕೊಳ್ಳಿ, ಹುಟ್ಟಿದಾಗಿನಿಂದ ಕನ್ನಡವನ್ನೇ ಮಾತನಾದುತ್ತಿರುವೆನಾದರು 'ಹ' ಎನ್ನಲು ಬರುವುದಿಲ್ಲ. (ಇದನ್ನೇ ಮುಂದಿಟ್ಟು ಕೊಂಡು ನನ್ನೆಲ್ಲಾ ಗೆಳೆಯರು ಕೀಟಲೆ ಮಾಡುತ್ತಾರೆ) ಇದು ಎಲ್ಲಾ ಹೊತ್ತಲ್ಲೂ ಒಂದೇ ರೀತಿ ಇಲ್ಲ. 'ಹಾಡು' ಎಂದೇಳಲು 'ಆಡು' ಅಂತಲೇ ಹೇಳುತ್ತೇನೆ. ಇನ್ನು ಕೆಲವು ಸಮಯದಲ್ಲಿ 'ಹ' ಕಾರವನ್ನು ಸರಿಯಾಗಿ ಉಲಿಯುತ್ತೇನೆ. 'ಆ' ಕಾರವನ್ನು 'ಹ' ಕಾರವಾಗಿ ಉಲಿಯಲು ನಾನು ಇಲ್ಲದ ಬವಣೆ ತೊಗೊಂಡರು ನನ್ನಿಂದ ಆಗುತ್ತಿಲ್ಲ. ಅದಕ್ಕಾಗಿ ಇದರ ಒಳವನ್ನು ಅರಿಯಲು ನಾನು ಮೊದಲುಮಾಡಿದಿ. ನನ್ನೂರಿನ ಜನಗಳು ಆಡುವ ಮಾತನ್ನು ಗಮನಿಸಿ ಕೇಳಿದೆ. ಆಗ ನನ್ನ ತಿಳುವಳಿಕೆಗೆ ಬಂದಿದ್ದು ಏನೆಂದರೆ ನಮ್ಮೂರಲ್ಲಿ ಜನರೆಲ್ಲ 'ಹಾಡು' ಗೆ 'ಆಡು ಅಂತಲೇ ಉಲಿಯುವುದು. 'ಹಾ' ಕಾರದ ಮುಂದೆ 'ಡ' ಕಾರ ಬಂದರೆ 'ಹಾ' ಕಾರ ಬಿದ್ದು 'ಆ' ಕಾರ ಎಂದು ಉಲಿಯುತ್ತದೆ. ಅದೇ 'ಹಾದರ' ಎನ್ನುವ ನುಡಿಯನ್ನು ನಾನು ಸರಿಯಾಗಿ 'ಹಾದರ' ಎಂದೇ ಉಲಿಯುತ್ತೇನೆ. ಇಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವುದು 'ಹಾ' ಕಾರದ ಮುಂದೆ ' ದ' ಕಾರ ಬಂದಿದೆ. ಅದಕ್ಕೆ 'ಹಾ' ಕಾರ ಸರಿಯಾಗಿ ನನ್ನ ಬಾಯಲ್ಲಿ ಉಲಿಯುತ್ತದೆ. ಎಲ್ಲಾ ಹೊತ್ತಲ್ಲೂ 'ಹ' ಬಿದ್ದು 'ಅ' ಕಾರವಾಗಿಲ್ಲ. ನನಗೆ ಇಂತಹ ಗೊಂದಲ ಇರುವಾಗ ಬರೆಯಲು ತುಂಬಾ ತೊಂದೆ ಆಗುತ್ತದೆ. ಕೆಲವು ಕಡೆ 'ಹ' ಕಾರ ಸರಿಯಾಗಿ ಬರೆದಿರುತ್ತೇನೆ ಇನ್ನು ಕೆಲವು ಕಡೆ 'ಹ' ಕಾರ ಸರಿಯಾಗಿ ಬಯುವುದಿಲ್ಲ 'ಅ' ಕಾರವಾಗೆ ಇರುತ್ತದೆ. ಈ ಗೊಂದಲ ನನ್ನಲ್ಲಿ ಯಾಕೆ? ಈ ಗೊಂದಲ ನನಗೊಂದೇ ಇದೆಯೋ ಇಲ್ಲ ಬೇರೆ ಯಾರಿಗಾದರು ಇದೆಯೋ?

ಇಂತಹುದೇ ಹಿನ್ನಲೆಯನ್ನು ಇಟ್ಟುಕೊಂಡು ಕನ್ನಡ ನುಡಿಯ ಕಟ್ಟಳೆ, ಅದರ ಒಳ ರಚನೆ ಬದಲಿಸ ಬೇಕೆಂದು "ಶಂಕರ ಬಟ್ಟರು" ಮೊದಲು ಮಾಡಿರುವುದು. ಇಂತಹುದೇ ಅನೇಕ ನುಡಿ ಕಟ್ಟಳೆಗನುಸಾರವಾಗಿ ನುಡಿಯನ್ನು ನುಡಿಯ ಬರವಣಿಗೆಯನ್ನು ಬದಲಾಯಿಸಿ ಕೊಳ್ಳಬೇಕು ಎಂದು ತಮ್ಮ ಹೊತ್ತಿಗೆಯಲ್ಲಿ (ಕನ್ನಡ ಬರಹ ಸರಿಪಡಿಸೋಣ) ಬಿಡಿಸಿ ತಿಳಿಸಿದ್ದಾರೆ. ಇದರಿಂದ ಕನ್ನಡದ ಕೈ ಕಾಲು ಮುರಿಯುವ ಮಾತೇನು ಬಂದು? ಇಂತಹ ನೂರಾರು ಒಳ ರಚನೆಯ ಬಗ್ಗೆ ಅದರಿಂದ ಮಾತಿನಲ್ಲಿ ಒಂದು ಕಟ್ಟಳೆ ಬರಹದಲ್ಲೊಂದು ಕಟ್ಟಲೇ ಇದ್ದರೆ ಕನ್ನಡದ ಮೇಲಾಗುವ ಕೇಡೇನು ಅನ್ನುವುದನ್ನು ಬಿಡಿ ಬಿಡಿಯಾಗಿ ತೆರೆದಿಟ್ಟಿದ್ದಾರೆ. ಈ ದಿಟವನ್ನು ಒಪ್ಪಿ ಕೊಳ್ಳುವ ಎದೆಗಾರಿಕೆ ನಮಗಿರಬೇಕು. ಅವರೇಳಿರುವ ಮಾತುಗಳನ್ನು ಒಳ ಹೊಕ್ಕು ನೋಡಿ ಮಾತನಾಡಬೇಕು. ಮಾತುಗಳನ್ನು ಬರಿ ಗಾಳಿಯಲ್ಲಿ ತೇಲಿಬಿಡುವುದಲ್ಲ.

ಇನ್ನು ಸಕ್ಕದ ನುಡಿ ಕನ್ನಡದಲ್ಲಿ ಬಳಸುವುದರ ಬಗ್ಗೆ ಮಾತನಾಡುವುದಾದರೆ, 'ಶುಭೋದಯ' ಕ್ಕೆ ಬದಲಾಗಿ ನಲ್ವಗಲು, ಚೆಂಬಗಲು, ನಲ್ನಾಳು, ಚನ್ನಾಳು ಇದ್ದಮೇಲೆ ಅದನ್ನು ನಾವು ಯಾಕೆ ಇಟ್ಟುಕೊಳ್ಳ ಬೇಕು? ಮತ್ತೆ ಆ ಪದವನ್ನು ಎರವಲಾಗಿ ಪಡೆದ ನುಡಿಯ ಬಗ್ಗೆ ಕೃತಜ್ಞತೆ ತೋರುವುದೇಕೆ? ನನ್ನ ಮಟ್ಟಿಗೆ ಕೇಳುವುದಾದರೆ 'ಶುಭೋದಯ' "ಕನ್ನಡದ ನಲ್ವಗಲು, ಚೆಂಬಗಲು, ನಲ್ನಾಳು, ಚನ್ನಾಳು" ಈ ಎಲ್ಲಾ ಒರೆಗಳನ್ನು ಮೂಲೆಗುಂಪು ಮಾಡಿದೆ. ಇನ್ನೇನು ಚಟ್ಟ ಕಟ್ಟಿ ಸಿದಿಗೇರಿಸಲು ತಯಾರು ಮಾಡಿಟ್ಟಿದೆ. ಇದರಿಂದ ನನಗೆ ಸಕ್ಕದೆಡೆಗೆ ಕೃತಜ್ಞತೆಯ ಬದಲು ಕಿಚ್ಚೇರುತ್ತದೆ. ಇದು ಒಂದು ಒರೆಯ ಗತಿಯಲ್ಲ ಕನ್ನಡದ ನೂರಾರು ಒರೆಗಳ ಗತಿ ಇದೆ. ನಿಧನರಾದರು, ವಿಧಿವಶರಾದರು, ದಿವಂಗತರಾದರು ಇನ್ನೂ ಅನೇಕೆ ಸಕ್ಕದ ಒರೆಗಳು ಕನ್ನಡದ ತೀರಿದರು, ಕಣ್ಮಿದರು, ಕೊನೆಯುಸಿರೆಳೆದರು, ಅಗಲಿದರು, ದೂರವಾದರು, ಶಿವನಡಿ ಸೇರಿದರು ಮುಂತಾದವುಗಳನ್ನು ನುಂಗಿ ನೀರು ಕುಡಿದಿದ್ದಾವೆ.

ನಲ್ಬೆಳಗು, ನಲ್ಮೂಡು, ಚಮ್ಮೂಡು ಅಂತ ಹೇಳಿದರೆ ಯಾರಿಗೆ ತಿಳಿಬೇಕು ಅನ್ನೊ ನಿಮ್ಮಂತವರಿಗೊಂದು ಮಾತು ನೆನಪಿರಲಿ. ಇವತ್ತು ಈ ಎಲ್ಲಾ ನಮ್ಮ ಒರೆಗಳು ಬೇರೆಯವರಿಗೆ ಹೇಳಿದರೆ ತಿಳಿಯದಿರುವುದಕ್ಕೆ ನೆವ (ಕಾರಣ) ನಾವು ನಮ್ಮದೆನ್ನುವುದನ್ನು ಮರೆತು ಪಕ್ಕದ ಹಾದರಗಿತ್ತಿಯರ ಸೆರಗು ಹಿಡಿದಿದ್ದಕ್ಕೆ. ನಮ್ಮವು ಅನ್ನುವುದು ಬಿಟ್ಟು ಚಂದ ಎಂದು ಬೇರೆಯದರ ಹಿಂದೆ ಬಿದ್ದಿದ್ದಕ್ಕೆ ನಮ್ಮದೇ ಆದರು ಗೊತ್ತಾಗದ ಹಾಗೆ ಇಂದು ನಮ್ಮ ಪಾಡಾಗಿರುವುದು. ಎಗ್ಗಿಲ್ಲದೆ ದಿನಪತ್ರಿಕೆಯಲ್ಲಿ ಬಳಸುವ ಸಕ್ಕದ ಹೊಡೆತಕ್ಕೆ ಸಿಕ್ಕು ಸಾಯುತ್ತಿರುವ ಕನ್ನಡ ನುಡಿಗಳು ಇಗೋ ಇಲ್ಲಿ ನೋಡಿ
ತಿಳಿ : () ಸಕ್ಕದ ಒರೆ
.........ಕರೆ(ಆಹ್ವಾನ), ಕೊನೆ(ಅಂತ್ಯ), ಕೊರತೆ(ಅಭಾವ), ಒತ್ತಾಯ (ಆಗ್ರಹ), ಸಿಗುತ್ತದೆ(ಲಭ್ಯ) ಒಪ್ಪಿಗೆ(ಅನುಮತಿ), ಸೆರೆ (ಬಂಧನ), ಮೊದಲು (ಪ್ರಥಮ) ಕೊಲ್ಲುವ (ಮಾರಕ) ಬೇಗ (ತ್ವರಿತ) ಕೊಡುಗೆ(ಪ್ರಧಾನ) ಹೂವು(ಪುಷ್ಪ, ಕುಸುಮ), ಕಲಿಕೆ (ಅಧ್ಯಯನ) ಇಲ್ಲದೆ (ಅನುಪಸ್ಥತಿ), ಸತ್ತ (ಮೃತ), ಸೋಲು(ಅಪಜಯ) ಹುಡುಕಾಟ( ಶೋದ) ಕೂಡಲೆ (ಶೀಘ್ರ) ಹೆಚ್ಚಳ (ವೃದ್ಧಿ) ಕಳವು (ಅಪಹರಣ), ಸುರು (ಚಾಲನೆ), ಒಪ್ಪಿಗೆ(ಅಸ್ತು), ನಡುವಿನ(ಮಧ್ಯಾಂತರ) ಹೆದರಿಕೆ( ಭೀತಿ), ಮರುಆಯ್ಕೆ(ಪುನರಾಯ್ಕೆ), ಸರಿ(ಸೂಕ್ತ), ನೋಟ(ದೃಷ್ಠಿ), ದೊಡ್ಡ(ಬೌಹತ್), ಆಟ (ಕ್ರೀಡೆ), ಹೊಗಳಿಕೆ(ಪ್ರಶಂಸೆ), ಬರೆದ(ಲಿಖಿತ), ಗುರುತಿಲ್ಲದ(ಅಪರಿಚಿತ), ಬದಲಾಗದ(ಅಭಾದಿತ), ಒಪ್ಪಿಗೆ(ಅನುಮೋದನೆ), ಕೂಡಲೆ, ಈಗಲೆ(ತಕ್ಷಣ) ಹಗಲಿರುಳು(ಆಹೋರಾತ್ರಿ), ಒಳ್ಳೆಯದು(ಶ್ರೇಷ್ಟ), ನಡೆದ(ಸಂಭವಿಸು), ಮೋಸಗಾರ(ವಂಚಕ) ಈಗ ಇಶ್ಟು ಸಾಕು..ಪತ್ರಿಕೆಯ ಸಕ್ಕದ ಪಂಡಿತರ ಉರುಳಿಗೆ ಸಿಕ್ಕು ಚಟ್ಟ ಏರುತ್ತಿರುವ ಕನ್ನಡದ ಮಿಕ್ಕ ಒರೆಗಳನ್ನು ನೀವೇ ಪಟ್ಟಿ ಮಾಡಿಕೊಳ್ಳಿ. ಇವತ್ತು ನೀವು ಈಗ ಹೇಳುವ ಮಾತಿನಂತೆ ಕನ್ನಡದ ನುಡಿಗಳೆಲ್ಲ ಮುಂದೊಂದು ದಿನ ಕನ್ನಡಿಗರಾದವರಿಗೆ ಯಾರಿಗು ತಿಳಿಯುವುದಿಲ್ಲ. ನುಡಿ (ಬಾಸೆ) ಬೆಳೆಯುತ್ತದೆ ಎಂದು ನೆವಹೂಡಿ ನಾವು ಈಗ ಎಗ್ಗಿಲ್ಲದೆ ಬಳಸುವ ಸಕ್ಕ ಇಂಬ್ಲೀಚಿನ ಕಯ್ಯಿಂದ ಕನ್ನಡದ ಕೊಲೆ ದಿಟ. ಯಾವ ಮಾರಿಯಿಟ್ಟುಕೊಂಡು ಸಕ್ಕಕ್ಕೆ ಕೃತಜ್ಞತೆ ತೋರಲಿ? ಕನ್ನಡವನ್ನು ಗುಡಿಸಿ ಗುಂಡಾರ ಮಾಡಿ ಮುಂಡಮೋಚಿದ್ದಕ್ಕೆ ಕೃತಜ್ಞತೆ ತೋರಲೇ? ನಮ್ಮಲ್ಲಿ ಇಲ್ಲದ ಒರೆ ನಾವೆ ಹುಟ್ಟುಹಾಕಬೇಕು ತಾನೆ? ಅದು ಬಿಟ್ಟು ಎಲ್ಲದಕ್ಕು ಸಕ್ಕದ ಹಿಂದೆ ಬಿದ್ದಿರುವ ಟೊಳ್ಳು ಪಂಡಿತರನ್ನು ಒಪ್ಪಿಕೊಳ್ಳಬೇಕೇ?

ಹರೀಶ ನೀವು ಹೇಳಿದ ಮಾತು,
"ಅಚ್ಚ ಕನ್ನಡದಲ್ಲಿ ನೀವು ಬರೆದಿರುವ ಕವನವನ್ನೇ ತೆಗೆದುಕೊಳ್ಳಿ. ಅದರಲ್ಲಿ ಮಹಾಪ್ರಾಣಗಳಿಲ್ಲ ಎಂಬುದು ನಿಜ. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬೇರೆ ಭಾಷೆಗಳ ಪದಗಳನ್ನು ಬಳಸದೆ ಲೇಖನ, ಕಥೆ, ಕವನ ಬರೆಯಿರಿ ಎಂದರೆ ಎಷ್ಟು ಜನ ಮುಂದೆ ಬರುತ್ತಾರೆ? ನಿಮ್ಮಂತೆ ಕನ್ನಡದ ಪದಗಳನ್ನೇ ಹುಡುಕಿ ಬರೆಯುವಷ್ಟು ತಾಳ್ಮೆ ಯಾರಿಗಿದೆ?"......
ಎಲ್ಲರಿಗೂ ಮುಟ್ಟದಿರುವ ಇಂತಹ ಬರಹ ಇದ್ದರೇನು ಸತ್ತರೇನು, ಬರೆದರೇನು ಬರೆಯದಿದ್ದರೇನು? ಇಂದಿಗೆ ಇಂತಹ ಸಕ್ಕ ಮತ್ತು ಇನ್ಯಾವುದೊ ಒರೆಗಳು ಸೇರಿಕೊಂಡು ಬಂದಿರೋ ನೂರಾರು ಕತೆ ಕಾದಂಬರಿ ಬಂದಿವೆ. ವೈಗ್ನಾನಿಕ ಬರಹ ಬಂದಿವೆ. ಆದರೆ ಅದ್ಯಾವುದು ಎಲ್ಲರನ್ನು ತಲುಪಿಲ್ಲ. ಕೆಲವು ಪಂಡಿತ ಜನ ಹಾಗು ನಾವೇನು ಕಡಿಮೆ ಏನು ಅನ್ನೊದನ್ನು ತೋರಿಸಿಕೊಳ್ಳೋ ಜನ ಈ ಎಲ್ಲಾ ಬಹರವನ್ನು ಓದಿದ್ದಾರೆ. ಇದುವರೆಗು ಆಡುನುಡಿಯಲ್ಲಿ ಬರೆದ ಬರಹಗಳೇ ಹೆಚ್ಚೆಚ್ಚು ಜನರನ್ನು ತಲುಪಿರುವುದು. "ನಿಮ್ಮಂತೆ ಕನ್ನಡ ಪದಗಳನ್ನು ಹುಡುಕಿ ಬರೆಯುವ ತಾಳ್ಮೆ ಯಾರಿಗಿದೆ" ಇಲ್ಲಿ ತಾಳ್ಮೆಯ ಮಾತೇ ಬರುವುದಿಲ್ಲ. ನನ್ನದೆನ್ನುವ ಹೆಚ್ಚುಗಾರಿಕೆ ಬೇಕು ನಮ್ಮದೆನ್ನುವುದನ್ನು ಕೆಚ್ಚೆದೆಯಿಂದ ತೊರಿಸುವ ಎದೆಗಾರಿಕೆ ಬೇಕು. ನನ್ನತನ ಗಾಳಿಗೆ ತೂರಿ ಕೀಳುತನದಲ್ಲಿ ಸಿಕ್ಕಿಹಾಕಿಕೊಂಡಿರುವುದಲಿಂದಲೇ ನಮ್ಮ ಈ ತಾಳ್ಮೆಗೆಟ್ಟ ನಡವಳಿಕೆ ಬಂದಿರುವುದು. ನಮ್ಮದು ಬೇರೆಯರಿಗಿಂದ ಕಡಿಮೆ ಅಲ್ಲ, ಅವರಿವರದಿದ್ದಂತೆ ನಮ್ಮದೂ ಮೇಲು ಅನ್ನುವ ದಿಟ್ಟ ನಂಬುಗೆ ನಮ್ಮಲ್ಲಿರಬೇಕ. ಅದೊಂದಿದ್ದರೆ ಎಲ್ಲದು ಮಾಡಿದಂತೆ.

ಎಂದಾದರು ಕನ್ನಡದ ವಿಗ್ನಾನ ಬರಹಗನ್ನು ನೀವು ಓದಿರುವಿರೇನು? ಅಂತಹ ಬರಹಗಳಲ್ಲಿ ಸಿಗುವುದು ನೂರಕ್ಕೆ ಎಂಬತ್ತು ಸಕ್ಕದ ಪದಗಳು. ಯಾವ ಗಂಟಸುತನಕ್ಕೆ ಈ ಸಕ್ಕದ ಪದಗಳು ಕನ್ನಡದಲ್ಲಿ ಬೇಕು? ನೇರವಾಗಿ ಇಂಬ್ಲೀಚ್ ಪದಗಳನ್ನೇ ಬಳಸಬಹುದಿತ್ತಲ್ಲ ನಮ್ಮೆಲ್ಲ ಬರಹದಲ್ಲಿ. ಇಂಬ್ಲೀಚ್ ನಂತೆ ಸಕ್ಕದ ಪದಗಳು ಕನ್ನಡದವರಿಗೆ ಹೊಸ ಒರೆಗಳೇ. ಇಂಬ್ಲೀಚ್ ಒರೆ ತಿಳಿಯಲು ಪಡಬೇಕಾದ ಪಡಿಪಾಟಲು ಸಕ್ಕದ ಒರೆ ತಿಳಿಯುವಾಗಲೂ ಪಡಬೇಕಾಗುತ್ತದೆ. ಈ ಮಾತನ್ನು ನೆನಪಿಲ್ಲಿ ಇಟ್ಟುಕೊಳ್ಳಿ ಇದು ಇವತ್ತಿನ ಕನ್ನಡದ ಮಟ್ಟಿಗೆ ದಿಟ, ಇವತ್ತು ಕನ್ನಡ ಓದುವರು ಕಡಿಮೆಯಾಗಿರುವುದು ಈ ಗೊಂದಲದಿಂದ. ಸಕ್ಕದ ಒರೆ ತುಂಬಿಕೊಂಡಿರೋ ನಮ್ಮ ಕನ್ನಡದ ಬರಹ ಬಿ.ಎ ಹಾಗು ಎಂ.ಎ. ಓದಿದವರಿಗೂ ತಿಳಿಯುವುದಿಲ್ಲ ಇನ್ನು ಕೊಂಚವೇ ಓದಲು ಬರೆಯಲು ತಿಳಿದ ಜನಗಳ ಪಾಡೇನು? ಒಮ್ಮೆ ನಿನ್ನ ತಿಳುವಳಿಕೆಯನ್ನು ಒರೆಯಿಟ್ಟು ನೋಡಿಕೊಳ್ಳಿ. ಕನ್ನಡದ ಒರೆಗಳನ್ನು ಹುಟ್ಟುಹಾಕಲು ನಮ್ಮಲ್ಲಿ ಮೂಲ ಒರೆಗಳಿಲ್ಲವೆ? ನುಡಿ ಕಾಂಡಗಳಿಲ್ಲವೆ? ಈ ಮಾತು ಒಪ್ಪಿಕೊಂಡು ಮನ್ನೆಡೆಯೋ ಎದೆಗಾರಿಕೆ ಗಂಡಸುತನ ಬೇಕು. ಸಕ್ಕ ಪುರಾತನ, ಹಿರಿದು, ಸಿರಿವಂತ ನುಡಿ, ಒಳ್ಳೆಯ ಗ್ನಾನ ಬಂಡಾರ ಎನ್ನೋ ಸೋಗಲಾಡಿತನವಲ್ಲ. ಮಹಾಪ್ರಾಣ ಬೇಕಾಗಿರುವುದು ಸಕ್ಕದ ಒರೆಗಳನ್ನು ಉಲಿಯುವುದಕ್ಕೆ. ಕನ್ನಡ ಉಲಿಯಲಿಕ್ಕೆ ಬೇಕಾಗಿಲ್ಲ. ಕನ್ನಡದ ಜನ "ಮುಖ್ಯಮಂತ್ರಿ" ಎಂದು ಆಡಲಾರರು 'ಮುಕ್ಯಮಂತ್ರಿ' ಎಂದೇ ಉಲಿಯುವುದು. ಇದು ದಿಟ. ಅದಕ್ಕೆ ತತ್ಸಮಕ್ಕೆ ಬದಲು ತದ್ಭವ ಬಳಸಬೇಕು. ನಮ್ಮ ನುಡಿ ಒಳಕಟ್ಟಳೆಗೆ ಹೊಂದುವ ರೀತಿಯಲ್ಲಿ ಬೇರೆ ನುಡಿಯ ಒರೆಗಳನ್ನು ಬದಲಿಸಿಕೊಳ್ಳ ಬೇಕು. ಭಾಷೆ ಯನ್ನು ನಮ್ಮಳ್ಳಿಗಳು ಬಾಸೇನೇ ಅನ್ನೋದು. ಜ್ಞಾನವನ್ನು ಗ್ನಾನ ಅನ್ನೋದು. ಹಳ್ಳಿಗಳೇ ಯಾಕೆ ಇವತ್ತಿನ ಮುಂದುವರಿದ ಊರುಗಳೆನಿಸಿಕೊಂಡ ದೊಡ್ಡ ದೊಡ್ಡ ಊರಲ್ಲೀಯೂ ಕೂಡ ತುಂಬಾ ಜನ ಮಾತನಾಡುವುದೇ ಹಾಗೆ. ಬೇಕೆನಿಸಿದರೆ ಕನ್ನಾಡಿನಲ್ಲಿ ನೂರಕ್ಕೆ ತೊಂಬತ್ತು ಹಳ್ಳಿ ಇವೆ ಅಲ್ಲೋಗಿ ನಮ್ಮ ಹಳ್ಳಿ ಜನರಾಡುವ ಮಾತನ್ನು ಕೇಳಿ.

ಯಾವನೋ ಸಕ್ಕದ ಒಲವಿರುವ ಒಬ್ಬ ಹುಚ್ಚು ಪಂಡಿತನು ಹುಚ್ಚಾಟಕೆ ಒಂದನೆಯ ತರಗತಿಯಲ್ಲೇ ಈ ಕೆಳಗಿನ ಸಕ್ಕದ ಒರೆಗಳನ್ನು ಪಡಿಪಾಟಲಿನಿಂದ ನನ್ನ ಹೊತ್ತೆಲ್ಲಾ ಹಾಳು ಮಾಡಿಕೊಂಡು ಕಲಿಯ ಬೇಕಾಯಿತು.
ಖಗ(ಹಕ್ಕಿ), ಛದ(ಮುಚ್ಚಳ), ಖರ(ಹೇಸರಗತ್ತೆ), ಐಲ(ಕುಭೇರ), ಮಥನ(ಕೆಯುವುದು), ಷಟ್(ಆರು), ಔರಸ(ಸ್ವಂತಮಗ),ಖುತ್(ಸತ್ಯ),ಊಷರ(ಸವುಳು ನೆಲ), ಷಡಂಗ(ಆರು ವೇದಾಂಗ), ಶಶಕ(ಮೊಲ), ಅಜ(ಬ್ರಹ್ಮ), ಶರ(ಬಾಣ), ಛಗ(ಹೋತ), ಜಠರ(ಹೊಟ್ಟೆ), ಧವಳ(ಬಿಳಿ), ಲಘಡ(ಹದ್ದು),ಪಥ(ಹಾದಿ), ಔಜಸ(ಹೊಳಪು),ಏಡ(ದಡ್ಡ),ಇನ(ನೇಸರ),ಅಂತಃಕಲಹ(ಒಳಜಗಳ),ಅಂಬರ(ಬಾನು), ಉರಗ(ಹಾವು), ನಯನ(ಕಣ್ಣು), ಚರಣ(ಹೆಜ್ಜೆ)

ಇವು ಕನ್ನಡದ ಒಂದನೆಯ ತರಗತಿಯಲ್ಲಿ ಇದ್ದ ಸಕ್ಕದ ಒರೆಗಳು. ಇಪ್ಪತ್ತಾರು ಏಡು ಬದುಕು ನಡೆಸಿ, ಓದು ಮುಗಿಸಿ ಇಂಜೀನೆಯರ್ ಆದರು ನನ್ನ ಬದುಕಿನಲ್ಲಿ ಈ ಒರೆಗಳ ಬಳಕೆ ಎಲ್ಲೂ ಆಗಲಿಲ್ಲ. ಯಾವ ಕೆಲಸಕ್ಕೂ ಬಾರಲಿಲ್ಲ. ಇನ್ನು ಹಳ್ಳಿ ಜನರ ಕೆಲಸಕ್ಕೆ ಹೇಗೆ ಬಂದಾವು? ಯಾಕೆ ನಮ್ಮೆಲ್ಲ ಬೆಲೆಕಟ್ಟಲಾರದ ಹೊತ್ತನ್ನು ಹಾಳು ಮಾಡಿಕೊಳ್ಳಬೇಕು? ನನ್ನ ಇಂತಹ ಬೆಲಕಟ್ಟಲಾರದ ಹೊತ್ತು ಹಾಳು ಮಾಡಿದ ಈ ಸಕ್ಕ, ಇಂಬ್ಲೀಚಿಗೆ ನಾನು ಕ್ರುತಗ್ನನಾಗಿರವಬೇಕೆ? ಕ್ರುತಗ್ನನಾಗಿರಬೇಕಾದ ಒಳ್ಳೆಯ ಕೆಲಸವೇನು ಆಗಿಲ್ಲವೆಂದಲ್ಲ. ಆದರೆ ಇಂದು ಆ ಕ್ರುತಗ್ನತೆ ನನ್ನಂತವನಲ್ಲಿ ಹಗೆಯಾಗುವಂತ ಮಟ್ಟಿಗೆ ನಮ್ಮ ಕನ್ನಡದ ಮೇಲೆ ಅಪ್ಪಳಿಸಿ ಬಿಟ್ಟಿವೆ.

ಒಳಹೊಕ್ಕು ನೋಡದೆ ತಿಳಿಗೇಡಿತನದಿಂದ ಇನ್ನೊಬ್ಬರ (ಶಂಕರ ಬಟ್ಟ) ಬಗ್ಗೆ ಅವರು ಮುಂದಿಟ್ಟಿರುವ ನುಡಿಯ ತಿಳಿವುಗಳ ಬಗ್ಗೆ ಕೀಳಾಗಿ ಮಾತಾಡಬಾರದು. ಬೇರೆ ನುಡಿಗಳ ಒರೆಗಳನ್ನು ಬಳಸಿಕೊಳ್ಳುವುದರ ಬಗ್ಗೆ ನಮಗೇನು ಕೇಡಿಲ್ಲ ಆದರೆ ಅದಕ್ಕೊಂದು ಎಲ್ಲೆ ಇರಬೇಕು. ಹದ್ದು ಮೀರಬಾರದು. ಇಲ್ಲದನ್ನು ಪಡೆಯಬೇಕು. ಅಂತಹ ಎದೆಗಾರಿಕೆ ತೋರೋಣ. ಆದರೆ ಎಲ್ಲೆ ಮೀರಿದಾಗ ಎಲ್ಲದೂ ಹೊಂದಿಕೆ ತಪ್ಪುತ್ತದೆ. ಸಕ್ಕ, ಇಂಬ್ಲೀಚ್ ಒರೆಗಳ ಬಳಕೆ ಕನ್ನಡದಲ್ಲಿ ಎಲ್ಲೆ ಮೀರಿ ಎಲ್ಲೋ ದೂರ ಹೋಗಿದೆ. ನಮ್ಮಂತವರಲ್ಲಿ ಕ್ರುತಗ್ನತೆಯ ಬದಲು ಕಿಚ್ಚನ್ನು ಇಟ್ಟಿವೆ. ಅದಕ್ಕೆ ಸಾಕ್ಶಿಯಾಗಿ ಕನ್ನಡದಲ್ಲಿರುವ ವಿಗ್ನಾನ ಬರಹದ ಒಳಹೊಕ್ಕು ನೋಡಿ. ಕನ್ನಡದ ಹೆಮ್ಮೆಯ ಕಬ್ಬಿಗ, ರಸ ಕವಿ, ರಸ ರುಶಿ (ನನಗಂತು ಅಲ್ಲ) ಕುವೆಂಪು ಅವರ ಒಂದು ಕಬ್ಬ ನೋಡು.

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧುಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಜಾತಕದೊಲು ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಂಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!

ಈ ಕಬ್ಬದಲ್ಲಿರುವ ಕನ್ನಡದ ಒರೆಗಳನ್ನು ಎಣಿಕೆಹಾಕಿ ನೋಡು. ಕನ್ನಡದ ಒರೆಗಳು ಏಸಿರಬಹುದು? ನೂರಕ್ಕೆ ಐವತ್ತು? ನಲವತ್ತು? ಇಪ್ಪತ್ತು? ಎಲ್ಲದೂ ತಪ್ಪು ಹತ್ತಕ್ಕಿಂತ ಕಡಿಮೆ ಇದ್ದಾವೆ. ಕನ್ನಡದಲ್ಲಿ ಬಿ.ಎ ಹಾಗು ಎಂ.ಎ. ಓದಿದವರಿಗು ಈ ಕಬ್ಬ ತಿಳಿಯುವುದಿಲ್ಲ. ಇನ್ನೂ ಒಂದೀಟು ಓದು ಬರಹ ಕಲಿತವರ ಪಾಡೇನು? ಯಾಕೆ ಇವತ್ತು ಕಬ್ಬ, ಕತೆ, ಬರಹಗಳಿಂದ ಕನ್ನಡದ ಜನ ದೂರ ಉಳಿದಿದ್ದಾರೆಂದು ತಿಳುಕೊಳ್ಳಿ. ಇವತ್ತು ನಮ್ಮ ಕನ್ನಡದ ಪಾಡು ಈಗಿರುವಾಗ ಮಹಾಪ್ರಾಣ ಬಳಕೆ ಸಕ್ಕವನ್ನು ಕನ್ನಡದಲ್ಲಿ ಇನ್ನೂ ನುಸುಳುವಂತೆ ಮಾಡುತ್ತದೆ. ಈ ಮಾತಲ್ಲಿ ಉರುಳಿಲ್ಲ. ಎಲ್ಲೂ ಕನ್ನಡಕ್ಕೆ ಹೊಂದಿಕೆಯಾಗದ ಕನ್ನಡಕ್ಕೆ ಉರುಳಾಗುವ ಮಹಪ್ರಾಣಗಳನ್ನೇಕೆ ಕನ್ನಡದಲ್ಲಿ ಬಳಸಬೇಕು? ಮಹಾಪ್ರಾಣ ಇದು ಬರಿ ಸಕ್ಕದ ಒರೆ ಬರೆಯಲು ಮಾತ್ರ ಮರೆಯಬೇಡಿ. ಅಂದರೆ ಇನ್ನೂ ಹೆಚ್ಚು ಹೆಚ್ಚು ಸಕ್ಕದ ಹೊರೆ ನುಸುಳಲು ನಾವೆ ಅನವು ಮಾಡಿಕೊಟ್ಟಂತೆ. ಎಲ್ಲಾ ಬಾಸೆಗಳು ಬೇರೆ ಬಾಸೆಯ ನುಡಿಗಳನ್ನು ತಮ್ಮ ಬಾಸೆಗೆ ತಮ್ಮ ಮಾತಿಗೆ ಹೊಂದುವಂತೆ ವಿರೂಪ (ನಿಮ್ಮ ಪ್ರಕಾರ)ಗೊಳಿಸೇ, ಬದಲಿಸಿಯೇ ಬಳಸಿರುವುದು. ಸಕ್ಕದಿಂದ ಇಂಬ್ಲೀಚಿ, ಮಾರಾಟಿ, ಗುಜರಾತಿ, ಪಂಜಾಬಿ, ಪಾಲಿ, ಪ್ರಾಕ್ರುತ ಬಾಸೆಗೆ ಎರವಲಾಗಿ ಹೊಗಿರುವ ಒರೆಗಳನ್ನು ಕಣ್ಬಿಟ್ಟು ಹುಡುಕಿ ನೋಡಿ.

ಈಗಾಗಲೆ ಎಲ್ಲೆ ಮೀರಿದ ಸಕ್ಕ, ಇಂಬ್ಲೀಚ್ ಒರೆಗಳ ಅಟ್ಟಹಾಸಕ್ಕೆ ಮೂಲೆಗುಂಪಾಗಿ ಮಲಗಿರುವ ಕನ್ನಡದ ಒರೆಗಳ ಸಾಲಲ್ಲಿ ಮಿಕ್ಕರುವ ಕನ್ನಡದ ನುಡಿಗಳು ಸೇರುತ್ತವೆ. ಆಗ ನಮ್ಮದೆಂದು ಉಳಿಯುವುದು ಬರಿ ತೊಕ್ಕು. ಸಕ್ಕ ಎನ್ನುವ ಮಡಿವಂತಿಕೆಯನ್ನು ಬಿಟ್ಟು ದಿಟ ಅಚ್ಚ ಕನ್ನಡವನ್ನು ಬಳಸುವಂತೆ ನಿಮಗೆ ಆ ಕನ್ನಡಾಂಬೆ ತಿಳುವಳಿಕೆಯನ್ನು ಕೊಡಲೆಂದು ಹಾರೈಸುವ ಕನ್ನಾಡಿಗ.

ನನಗೆ ಸಕ್ಕದ ಮೇಲೆ ಕೋಪವಿಲ್ಲ, ಹಗೆಯಿಲ್ಲ, ನಂಜಿಲ್ಲ, ಕನ್ನಡ ಬಳಸಬೇಕೆನ್ನುವ ಎದೆಯಲ್ಲಿ ಹೊಗೆಯಾಡುವ ಕಿಚ್ಚು ಇದೆ. ನನ್ನತನವನ್ನು ತೋರಿಸು ಗಟ್ಟಿನಿಲುವಿದೆ. ಅದೇ ನನ್ನತನವನ್ನು ತೋರಿಸುವುದು. ಅದಕ್ಕೆ ನನಗೆ ಅಚ್ಚ ಕನ್ನಡವೊಂದೇ ದಿಟ.

ನನ್ನಿ
ಕುಮಾರಸ್ವಾಮಿ. ಕಡಾಕೊಳ್ಳ.

Unknown ಹೇಳಿದರು...

ಯಪ್ಪಾ ಹರೀಸಪ್ಪ,
"ಬಾಸೆ, ಭಾಸೆ, ಬಾಶೆ, ಭಾಶೆ, ಬಾಷೆ, ಭಾಷೆ - ಇದರಲ್ಲಿ ಯಾವುದು ಸರಿ ಎಂದರೆ ಏನೆನ್ನುತ್ತೀರಿ?" ನಿಮ್ಮ ಈ ಮಾತ್ಕೇಳಿ ಅಳಬೇಕು ಅನ್ಸಾಕತ್ಯಾದೆ ನೋಡ್ರಿ.

ಕನ್ನಡದವರು ಬಾಸೆ, ಬಾಶೆ ಇವೆರೆಡೆ ಅನ್ನೊದು. ಅವೆರೆಡೂ ಕನ್ನಡಕ್ಕೆ ಸಾಕು. ಅದಕ್ಕೆ ಬದಲಾಗಿ ಕನ್ನಡದಲ್ಲಿ ನಿನ್ನ ಬಾಸೆಗೆ ಬದಲಾಗಿ 'ನುಡಿ' ಅಯ್ತಿ ನೋಡು. ಮೊದಲಾ ಕನ್ನಡದ ನುಡಿ ಬಳಸೋಣಪ್ಪ. ಆಮ್ಯಾಕಿ ಬಾಸೆ ಬಗ್ಗೆ ನೋಡೋಣ. ಗೊಡ್ಡುತಕ್ಕೆ ಬಿದ್ದರೆ ಬೇರೇದನ್ನು ತಿಳುಕೊಳ್ಳದಂತ ಕೊಬ್ಬು ಮಯ್ಗೇರಿ ಬಿಡುತ್ತೆ. ಅದನ್ನೇ ಸಕ್ಕದವರು 'ಅಹಂ' ಅಂತಾರೆ. ಇಂಬ್ಲೀಚಲ್ಲಿ 'ಇಗೊ' ಅಂತಾರೆ. ಕನ್ನಾಡಿಗರು ಪೆರ್ಚು,ಪೊಗರು, ತೊಡರು, ಬಿಂಕ, ಪುಗ್ಗು, ಪನ್ನ, ದಪ್ಪ, ತಲೆಸುತ್ತು, ಉಕ್ಕು, ಕೆಂಚು, ತಿಮಿರು, ಪೊಂಗು, ಬಿಗುಪು, ಬಿಮ್ಮು, ಬೆಸೆ, ಮುಕ್ಕು, ಮುರುಕು, ಮೊಂಡು, ವಿಡಾಯ, ಸೆಡಕು, ಸೆಡವು, ಸೊಕ್ಕು, ಹೆಡಸು ಅಂತಾರೆ. ಕನ್ನಾಡಿನ ನೂರು ಹಳ್ಳಿಗೆ ಹೋಗು. ಅಲ್ಲಿ ತಿರುಗಾಡಿಕೊಂಡು ಅಲ್ಲಿ ಮಂದಿ ಸಕ್ಕದ ಭಾಷೇನ ಎನಂತಾರೆ, ಹೇಗೆ ಹೇಳುತ್ತಾರೆ ಕೇಳ್ಕೊಂಡು ಬಾ. ಆಗ ತೋಸ್ರು ನಿನ್ನ ತಿಮಿರು. ಸುಮ್ನೆ ಕಕ್ಕಸು ಮಾತಾಡ್ ಬ್ಯಾಡೊ ಹರೀಸಪ್ಪ.

ಅಲ್ಲೋ ಹರೀಸ, ಕೆಳಗಿನ ನಿನ್ನ ಮಾತು ಚಲೋ ಅನಿಸ್ಯಾಕತ್ತಾತೇನು?

"ಸಂಸ್ಕೃತದ "ಭಾಷಾ"ವನ್ನು ಕನ್ನಡದಲ್ಲಿ "ಭಾಷೆ" ಅಂತ ಬರೆದು ಸಂಸ್ಕೃತವನ್ನು ಯಾಕೆ ಹಾಳುಮಾಡ್ತೀರಿ ಅಂತ ನಾನು ಕೇಳಿದರೆ ನಿಮ್ಮ ಉತ್ತರ ಏನು?"

ಸಕ್ಕನ ಹಾಳುಮಾಡು ಅಂತ ಯಾರು ಹೇಳ್ಯಾರೆ? ತಮ್ಮ ಮಾತಿಗೇ ಹೊಂದಾಂಗೆ ಬೇರೆ ಬಾಸೆನ ಬದಸ್ಕೋಳ್ಳೊದನ್ನ ತದ್ಬವ ಅಂತಾರೋ. ಇದು ಎಲ್ಲಾ ಬಾಸ್ಯಾಗೆ ಅಯ್ತೆ ನೋಡು. ನಿಮ್ಮಂಗೆ ಈಗೆ ಸಂಸ್ಕ್ರತ ಅಂತ ಬಾಯ್ಬಡ್ಕಂತಿದ್ರೆ ಒಂದು ದಿನ ನಿನ್ನ ಸಕ್ಕನೂ ಬ್ಯಾಡ, ತತ್ಸಮನೂ ಬ್ಯಾಡ, ತದ್ಬವನೂ ಬ್ಯಾಡ ಅಂತ ಚಲ್ಲಾಣ ಉದ್ರಿಸಿ ಕಳ್ಸಬೇಕಾತ್ತದೆ. ಹುಚ್ಚು ಸೂಳೆಮಕ್ಳು ಬ್ಯಾಡ ಇಲ್ಲದ ಕಡೆ ತುಡುಗುದನ ನುಗ್ಗಿಸದಾಂಗ ಸಕ್ಕದ ಪದಾನಾ ತುರಕ್ಯಾರೆ. ಮತ್ತೇ ತುಕೋದು ಬ್ಬ್ಯಾಡ. ನಮ್ಮ ನುಡಿ ಆಳಾಗುತ್ತೆ. ಮಾತು ಸರಿ ಅಯ್ತಲ್ಲ.

@@
ಈ ಕೆಳಗಿನ ಮಾತು ಕರೆ ಅನಿಸಿದೆ ಏನು ನಿನಗೆ?
"ಸಂಸ್ಕೃತದ ಎಲ್ಲ ಆಕಾರಾಂತ ಸ್ತ್ರೀಲಿಂಗ ಪದಗಳೂ ಕನ್ನಡದಲ್ಲಿ ಎ ಅಕ್ಷರದಿಂದ ಕೊನೆಗೊಳ್ಳುತ್ತವೆ. ಉದಾ: ಗಂಗೆ, ಯಮುನೆ, ಕೃಷ್ಣೆ, ಶ್ಯಾಮಲೆ, ಸುಧೆ..."
ನೋಡೋ ಹುಚ್ಚು ಮುಂಡೆ ಹರೀಸ. ಕನ್ನಡಕ್ಕೆ ಕನ್ನಡದೇ ಆದ ವ್ಯಾಕರಣ ನೇಮ ಅಯ್ತೆ. ಅದನ್ನ ಮೊದಲಯ ತಿಳ್ಕಾ. ತಿಳ್ಕಾದಾಂಗೆ ತಿಕಲು ತರ ಇನ್ನೊಂದು ಬಾಸೆ ವ್ಯಾಕರನದ ಬಗ್ಗೆ ಇಲ್ಲಿ ತಂದು ಕೂಗಾಡಬ್ಯಾಡ. ತಿಳ್ಕೋ ಅಮೇಲೆ ಈ ಸಕ್ಕದ ಆಕಾರ ಎಕಾರ ನಮ್ಮ ನುಡಿ ವ್ಯಾಕರಕ್ಕೆ ಸರಿ ಹೊಂದುತ್ತದೊ ಇಲ್ಲೊ ತಾಳೆ ಹಾಕಿ ನೋಡು. ಕುಲ್ಡ್ರಂಗೆ ಒಲವು ತೋರ್ಸಬ್ಯಾಡ.

@@
ಸರಿಯಾಗಿ ಕಲಿಸಿದರೆ ಸರಿಯಾಗಿ ಉಚ್ಚರಿಸಲು ಬರುತ್ತದೆ. ಚಿಕ್ಕವರಿದ್ದಾಗ ಕೆಲವರಿಗೆ "ರ" ಅಕ್ಷರ ಉಚ್ಚರಿಸಲು ಬರುವುದಿಲ್ಲ. "ಲ" ಎನ್ನುತ್ತಾರೆ. ಅಂಥ ಮಕ್ಕಳಿಗೆ ಸರಿಯಾದ ಉಚ್ಚಾರ ಕಲಿಸುತ್ತೀರೋ ಅಥವಾ ಭಾಷೆ ಬದಲಿಸುತ್ತೀರೋ?

ಅವನ್ವನ ಆ ಮಕ್ಕಳಿಗೆ ನಾವ್ಯಾಕೆ ಕಲ್ಸಿಬೇಕೊ, ಅವೇ ಕಲ್ತಗಂತಾವೆ, ನೀನು ಕಲಿಸಿದ್ರೂ ಅವ್ರ ಸುತ್ತಾ ಮುತ್ತಾ ಇರೋ ಮಂದಿ ಮಾತಾಡಿದಾಂಗೆ ಅವು ಆಡಾಕತ್ತಾವೆ. ಬೇಕಾದ್ರೆ ನೀನೊಂದು ಪರೀಕ್ಶೆ ಮಾಡಿ ನೋಡು. ನಿನ್ನ ಮಗನ್ನ ದಾರವಾಡಕೆ ಕಳಿಸು. ಮನೆಯಲ್ಲಿ ನಿನ್ನ ಮಡಿವಂತಿಕೆ ಗಿಳಿಪಾಟ ಹೇಳ್ಕೊಡು. ಆದ್ರೂನೂ ನಿನ್ನ ಮಗ ದಾರವಾಡದ ಮಂದಿ ಮಾತಾಡ್ದಂಗೆ ಮಾತಾಡ್ಲಿಲ್ಲ ಬಿಡ್ತು ಅನ್ನು....ತಲೆ ಅಲ್ಲಾಡಿಸಿ ಬಿಡೋದಲ್ಲ ಮಾಡ್ನೋಡು ಒಂದಸಲಿ. ಅದಾ ನೋಡೊ ಹರೀಸ ಬಾಸೇ ಮಯಿಮೆ.

@@

"ಭಾರತೀಯ ಭಾಷೆಗಳಲ್ಲಿ ವರ್ಣಮಾಲೆ ವೈಜ್ಞಾನಿಕವಾಗಿ ರೂಪಿಸಲ್ಪಟ್ಟಿದೆ. ಯಾವ ಯಾವ ಅಕ್ಷರ ಬಾಯಿಯ ಯಾವ ಭಾಗದಿಂದ ಹುಟ್ಟುತ್ತದೆಯೋ ಅದರ ಮೇಲೆ ಆಧರಿಸಿ ಅವುಗಳನ್ನು ವಿಂಗಡಿಸಲಾಗಿದೆ. ನಿಮಗೆ ತಿಳಿದಿರಬಹುದಾದಂತೆ ಸ-ದಾಂತ್ಯ (ಹಲ್ಲಿಗೆ ನಾಲಿಗೆ ತಾಗಿ ಹುಟ್ಟುತ್ತದೆ), ಶ-ತಾಲವ್ಯ (ಹಲ್ಲಿನ ಮೇಲ್ಭಾಗಕ್ಕೆ ನಾಲಿಗೆ ತಾಗಿ ಹುಟ್ಟುತ್ತದೆ), ಷ-ಮೂರ್ಧನ್ಯ (ಬಾಯಿಯ ಮೇಲ್ಭಾಗಕ್ಕೆ ನಾಲಿಗೆ ತಾಗಿ ಹುಟ್ಟುತ್ತದೆ)"

ನಿನ್ನ ಮೇಲಿನ ಮಾತು ಸುದ್ದ ಸುಳ್ಳ ಅಯ್ತಿ ನೋಡ್ಲೆ ಮಗನಾ..
ಎಲ್ಲಾ ಬಾಸೆ ಅಕ್ಕರ ಮಾಲೆ ವಯ್ಗ್ನಾನಿಕವಾಗೆ ಇದ್ದಾವೆ ನಿನ್ನ ಬಾರತಿಯ ಬಾಯದೊಂದೇ ಅಲ್ಲ. ಅವು ಜೀವಂತವಾಗಿ ಇದವೇ ಅಂದ ಮೇಲೆ ಅವಕ್ಕೆ ನೇಮ, ಕಟ್ಟಳೆ ಚನ್ನಾಗೆ ಇದ್ದಾವೆ. ನಿನ್ನದೊಂದೇ ಅಲ್ಲ ದೊಡ್ಡದು. ನಿನಗೆ ನಿಂದು ಯೋಟು ದೊಡ್ಡದೋ ಅಟೇ ಅವ್ರಿಗೆ ಅವ್ರದು.
ಇಂತ ಎಡಬಿಡಂಗಿ ತಿಮರು ಬಿಟ್ಟು ಬದುಕೋದು ಕಲಿ.
ಆ ವಯ್ಗ್ನಾನಿ ಅನ್ನೋದು ಏನಂತ ಹೇಳ್ಲೇ ನೋಡೋಣ. ನೀನೇನು ಹೇಳ್ತಿಯೋ ಅದೇ ಬದ್ದ ಏನು? ಅದೇ ವಯ್ಗ್ನಾನಿ ಏನು?
@@
""""""ಇದನ್ನು ಮನೆಯಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ತಿಳಿಸಿ ಹೇಳಿಕೊಟ್ಟರೆ ಹೇಳಲು ಬಂದೇ ಬರುತ್ತದೆ. ಅದೂ ಅಲ್ಲದೆ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವವರಂತೆ ಅಲ್ಪಪ್ರಾಣಗಳ ಬದಲು ಮಹಾಪ್ರಾಣಗಳನ್ನು ಬಳಸುವವರೂ ಕಡಿಮೆಯೇನಿಲ್ಲ. ವಿಧ್ಯಾರ್ಥಿ, ಭಂಧ ಎನ್ನುವವರು ಎಲ್ಲೆಡೆ ಇದ್ದಾರೆ. ಇವೆಲ್ಲಾ ಗಮನಿಸಿದರೆ ಮಹಾಪ್ರಾಣಗಳು ನಿಮಗಲ್ಲದಿದ್ದರೂ ಸರಿಯಾಗಿ ಉಚ್ಚರಿಸಲು ಬರುವವರಿಗಾದರೂ ಅಗತ್ಯವಿದೆ ಎಂದೆನಿಸುವುದಿಲ್ಲವೆ? ಕುಣಿಯಲು ಬಾರದೆ ನೆಲ ಡೊಂಕು ಎನ್ನುವುದು ಸಲ್ಲ.""""

ತೂ ನಿನ್ನ ನಿನಗೆ ನಾಚಿಗೇನೆ ಇಲ್ಲ ಅನ್ಸಾಕತ್ತಿತಲ್ಲೋ ನಂಗ್ಯಾಕೋ.
ನೀನು ಕನ್ನಡಕ್ಕೆ ಹುಟ್ಟಿದಿಯೋ ಇಲ್ಲ ಸಕ್ಕದ ಮನ್ಯಾಗೆ ಹುಟ್ಟಿದಿಯೋ? ಲೇ ಯಪ್ಪಾ ನೀನೇನು ಜುಟ್ಟು ಬಿಡೋ ಬ್ರಾಂಬ್ರು ಜಾತ್ಯಾನ್ ಏನು? ಮತ್ತೇ ನೀನು ಮಹಾಪ್ರಾಣ ಅಂತೀಯಲ್ಲೊ ಅವು ಕನ್ನಡದವು ಅಲ್ಲೋ. ನಿನಗೆ ಬೇಕಾದ್ರೆ ಇಟ್ಗೋ. ಆದ್ರೆ ಅವನ್ನ ಹೇಳಾಕೆ ಬರದ ಕನ್ನಡ ಮಂದಿ ಎದಿಗೆ ತಂದು ಇರಿಬ್ಯಾಡ್ರೋ. ಯಾಕೋ ನಿಮ್ಮ ಇದನ್ನೆಲ್ಲ ನೊಡಿದ್ರೆ ಒಳ್ಳೆ ...ಬ್ರಾಂಬ್ರು ಅನಿಸುತ್ತೆ. ಯೋಚ್ನೆ ಮಾಡ್ಬೇಡ ನಾನು ಬ್ರಾಂಬ್ರು ಮನ್ಯಾಗೆ ಹುಟ್ಟಿರೋದು. " ಕನ್ನಡ ಬರಹ ಸರಿಪಡಿಸೋನ" ಅನ್ನೊ ಹೊತ್ತಿಗೆ ಬರೆದಿರೋ " ಶಂಕರ ಬಟ್ಟರು" ಕೂಡ ಬ್ರಾಂಬ್ರೆ

Harisha - ಹರೀಶ ಹೇಳಿದರು...

ಕುಮಾರಸ್ವಾಮಿಯವರೇ, ನಿಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಬರೆದಿದ್ದು ಮುದ ನೀಡಿತು.

ಇಲ್ಲಿ ಕೆಲವು ಬೀದಿ ನಾಯಿಗಳು "ಹಚ" ಎಂದರೆ "ಅಚ್ಛಾ" ಎಂದು ಬಂದು ಬೊಗಳುತ್ತಿವೆ. ಅವುಗಳ ಜೊತೆ ದನಿಗೂಡಿಸುವ, ಅವುಗಳ ಕೂಗಿಗೆ ಉತ್ತರಿಸುವ ಗೋಜಿಗೆ ನಾನು ಹೋಗುವುದಿಲ್ಲ. ಆದರೆ ಚರ್ಚಿಸಬಯಸುವ ಎಲ್ಲರಿಗೂ ಕೆಲ ಕಿವಿಮಾತುಗಳನ್ನು ಹೇಳಬಯಸುತ್ತೇನೆ:

೧) ಭಾಷೆ ಸಭ್ಯತೆಯ ಮೇರೆ ಮೀರದಿರಲಿ.
೨) ಜಾತಿಗೂ, ಭಾಷೆಗೂ ನೀರು-ಎಣ್ಣೆಯ ಸಂಬಂಧ. ಅವುಗಳನ್ನು ಸೇರಿಸಬೇಡಿ.
೩) ಚರ್ಚೆ ನಡೆಯುತ್ತಿರುವುದು ಕನ್ನಡದ ಬಗ್ಗೆ. ಯಾವುದೇ ವ್ಯಕ್ತಿಯ ಬಗ್ಗೆಯಲ್ಲ. ನಮ್ಮಲ್ಲಿ ಯಾರಿಗೂ ಯಾರ ಮೇಲೂ ದ್ವೇಷವಿಲ್ಲ. ಸುಮ್ಮನೆ ಹೀಯಾಳಿಸುವುದು, ಬಯ್ಯುವುದು ಏಕೆ?
೪) ನಾನು Comment moderation ಇಟ್ಟಿಲ್ಲ, ಇಡುವುದೂ ಇಲ್ಲ. ಆದರೆ ಸಭ್ಯತೆಯ ಮೇರೆ ಮೀರಿದರೆ ಅಂಥ ಪ್ರತಿಕ್ರಿಯೆಯನ್ನು ಖಂಡಿತ ಬ್ಲಾಗಿನಿಂದ ತೆಗೆಯುತ್ತೇನೆ. ಹೇಳುವುದನ್ನೇ ಸ್ಪಷ್ಟವಾಗಿ, ಸರಿಯಾಗಿ ಹೇಳಿದರೆ ಒಳಿತು.

ಇನ್ನು ನಿಮಗೆ ಪ್ರತಿಕ್ರಿಯೆ:

ಸಂಸ್ಕೃತ ಮೇಲು, ಕನ್ನಡ ಕೀಳು ಎಂದು ನಾನೆಲ್ಲೂ ಹೇಳಿಲ್ಲ. ನೀವು ಹಾಗೆಂದುಕೊಂಡಿದ್ದೀರಿ.
ಅಷ್ಟಕ್ಕೂ ಕನ್ನಡದಲ್ಲಿ ಒಂದೂ ಮಹಾಪ್ರಾಣ ಇಲ್ಲವೇ ಇಲ್ಲ ಎಂಬಂತೇನೂ ಇಲ್ಲ; ಅದು ಕೇವಲ ಶಂಕರ ಭಟ್ಟರು ಸೃಷ್ಟಿಸಿರುವ ಭ್ರಮೆ. ಅಚ್ಚ ಕನ್ನಡ ಪದಗಳಾದ ಠಕ್ಕ, ಠಸ್ಸೆ, ಅಷ್ಟು, ಇಷ್ಟು, ಫೇಣಿ, ಅಂಥ (ಅಂತಹ), ಇಂಥ (ಇಂತಹ), ಎಂಥಾ (ಎಂತಹ) ಇವೆಲ್ಲ ಮಹಾಪ್ರಾಣ ಹೊಂದಿವೆ. ಇನ್ನೂ ಹೆಚ್ಚು ಇರಬಹುದು. (ಅದು ಅಶ್ಟು, ಇಶ್ಟು, ಅಂತ, ಇಂತ ಎಂದು ಇಲ್ಲಿ ಕೆಲವು ಬೀದಿನಾಯಿಗಳು ಬೊಗಳಲು ಬರಬಹುದು... ಅವುಗಳಿಗೆ ನಾನು ಜವಾಬ್ದಾರನಲ್ಲ)

ಇನ್ನು ಹಕಾರದ ಬಗ್ಗೆ: ನೀವೊಬ್ಬರೇ ಅಲ್ಲ, ಎಷ್ಟೊಂದು ಜನ ಹಕಾರ ಉಚ್ಚರಿಸಲು ಕಷ್ಟ ಪಡುತ್ತಾರೆ. ಅದು ನನಗೆ ತಿಳಿದಿದೆ. ನಟ ರವಿಚಂದ್ರನ್ ಕೂಡ ಅವರಲ್ಲೊಬ್ಬರು. ಅದು ತಪ್ಪು ಎನ್ನಲಾಗುವುದಿಲ್ಲ. ಆದರೆ ಬರೆಯುವಾಗಲಾದರೂ ಸರಿಯಾಗಿ ಬರೆಯಬಹುದಲ್ಲವೆ? ಆಲು, ಆವು ಎಂದು "ಬರೆಯುವುದಕ್ಕಿಂತ" ಹಾಲು, ಹಾವು ಎಂದು "ಬರೆದರೆ" ಓದುವವರಿಗೆ ಸುಲಭವಾಗುತ್ತದೆ.

ಸಂಸ್ಕೃತ ಪದಗಳ ಬದಲು ಇರುವ ಕನ್ನಡ ಪದಗಳನ್ನು ಬಳಸಿ, ಆದರೆ ಅದು ಸಾಧ್ಯವಾಗದಿದ್ದರೆ ಸರಿಯಾಗಿ ಮೂಲ ಪದ ಬಳಸಿ ಎಂದು ನಾನು ಹೇಳುತ್ತಿರುವುದು.
ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ:
(ಈ ಪದಗಳು ಜನರ ಬಾಯಲ್ಲಿ ಮೂಲರೂಪದಲ್ಲಿ ಹೇಳಲ್ಪಡುವುದಿಲ್ಲ ಎಂಬುದು ದಿಟ)
ಗ್ನಾನ = ಜ್ಞಾನ = ತಿಳುವಳಿಕೆ
ವಿಗ್ನಾನ = ವಿಜ್ಞಾನ = ಹೆಚ್ಚು ತಿಳುವಳಿಕೆ
ವೈಗ್ನಾನಿಕ = ವೈಜ್ಞಾನಿಕ = ಹೆಚ್ಚು ತಿಳುವಳಿಕೆಯ
ಕೃತಗ್ನ = ಕೃತಜ್ಞ = ಮಾಡಿದ್ದನ್ನು ನೆನೆಸಿಕೊಳ್ಳುವವ
ಕೃತಗ್ನ = ಕೃತಘ್ನ = ಮಾಡಿದ್ದನ್ನು ಮರೆಯುವವ

ನಾನು ಹೇಳುತ್ತಿರುವ ಎರಡು ಅಂಶಗಳನ್ನು ಮತ್ತೊಮ್ಮೆ ಇಲ್ಲಿ ಸ್ಪಷ್ಟಪಡಿಸಿದ್ದೇನೆ:

೧) ಕನ್ನಡ ವರ್ಣಮಾಲೆಯಿಂದ ಮಹಾಪ್ರಾಣ ಬಿಡಬಾರದು. ಅದರಿಂದ ಬೇರೆ ಭಾಷೆಯ ಪದಗಳನ್ನು ಬಳಸುವುದು ಅಸಾಧ್ಯವಾಗುತ್ತದೆ. ಬೇಕಿದ್ದರೆ ಇನ್ನೂ ಹೆಚ್ಚು ಅಕ್ಷರಗಳನ್ನು ಸೇರಿಸೋಣ. ಉದಾ: ಜ಼್, ಫ಼್

೨) ಕನ್ನಡದ್ದೇ ಇರಲಿ, ಸಂಸ್ಕೃತದ್ದೇ ಇರಲಿ, ಒಂದು standard ಪದ ಇರಬೇಕು. ಉದಾ: "ಆಗುವುದು" ಎಂಬುದು standard ಪದ. ಜನ ಆಗುವುದು, ಹಾಗುವುದು, ಆಗೋದು, ಹಾಗೋದು ಎಂದು ನೂರಾರು ರೀತಿ ಹೇಳಲಿ, ಅಭ್ಯಂತರವಿಲ್ಲ. "ಹೋಗುತ್ತೇನೆ" ಎಂಬುದು standard ಪದ. ಅದನ್ನು ಜನ ಹೋಗ್ತೇನೆ, ಹೋಗ್ತೀನಿ, ಹೋಕೇನಿ, ಹೋಕೀನಿ, ಹೋತೆ ಎಂದು ಅವರ ಸುತ್ತಮುತ್ತಲಿನ ಆಡುಭಾಷೆಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅದು ತಪ್ಪಲ್ಲ.

ಚಿಕ್ಕಂದಿನಿಂದ ಕನ್ನಡ ಪದಗಳನ್ನು ತಿಳಿಸಿ ಮಕ್ಕಳನ್ನು ಬೆಳೆಸಿದರೆ ಕನ್ನಡವನ್ನು ಮತ್ತೆ ಬೆಳೆಸಬಹುದೇನೋ. ಅದು ಬಿಟ್ಟು ಅಕ್ಷರಗಳನ್ನು ತೆಗೆದು ಹೀಗೇ ಮಾತನಾಡಿ ಎಂದು ಬಲವಂತವಾಗಿ ಹೇರಬಾರದು.

Achha/Anonymous: ಇಷ್ಟರ ಮೇಲೂ ನಿಮಗೆ ನಿಜಕ್ಕೂ ಚರ್ಚೆಯಲ್ಲಿ ಭಾಗವಹಿಸಬೇಕೆಂಬ ಇರಾದೆಯಿದ್ದರೆ ನೀವು ಏನು ಹೇಳಬೇಕೆಂದಿದ್ದೀರೋ ಅದನ್ನು ಸ್ಪಷ್ಟವಾಗಿ ಹೇಳಿ. ಸುಮ್ಮನೆ ಅಶ್ಲೀಲ, ಅಸಭ್ಯ ಪದಗಳನ್ನು ಬಳಸುವುದಲ್ಲ. ನಿಮಗಿಂತ ಹೆಚ್ಚು ಅಂಥ ಪದಗಳು ನನಗೆ ಗೊತ್ತು. ಆದರೆ ಯಾರಿಗೂ ಬಯ್ಯುವುದು ನನ್ನ ಜಾಯಮಾನವಲ್ಲ. ಆ ಪದಗಳನ್ನು ನಾನು ತಮಾಷೆಗೂ ಸಹ ಗೆಳೆಯರಿಗೆ ಕೂಡ ನಾನು ಬಳಸಿಲ್ಲ/ಬಳಸುವುದಿಲ್ಲ.

ಕೊನೆಯದಾಗಿ ಹೇಳುತ್ತೇನೆ ಕೇಳಿ: ನಾನು ಹವ್ಯಕ ಬ್ರಾಹ್ಮಣ. ನನ್ನ ಮಾತೃಭಾಷೆ ಹವಿಗನ್ನಡ. ಇದು ಈಗ ಬಳಕೆಯಲ್ಲಿರುವ ಕನ್ನಡದ ಉಪಭಾಷೆ (dialect)ಗಳಲ್ಲಿಯೇ ಅತಿ ಹೆಚ್ಚು ಹಳೆಗನ್ನಡ ಪದಗಳ ಬಳಕೆಯನ್ನು ಹೊಂದಿದೆ. ಹಾಗಾಗಿ ನನಗಾಗಿ ಯಾರೂ ಇಲ್ಲಿ ಕನ್ನಡ ಪದಗಳ ಪಟ್ಟಿ ಮಾಡುವ ಅವಶ್ಯಕತೆಯಿಲ್ಲ. ದಯವಿಟ್ಟು ಜಾತಿಯ ಆಧಾರದ ಮೇಲೆ ಚರ್ಚೆ ಮುಂದುವರೆಸಬೇಡಿ.

Unknown ಹೇಳಿದರು...

ಕೊನೆಯದಾಗಿ ಹೇಳುತ್ತೇನೆ ಕೇಳಿ: ನಾನು ಹವ್ಯಕ ಬ್ರಾಹ್ಮಣ. ನನ್ನ ಮಾತೃಭಾಷೆ ಹವಿಗನ್ನಡ. ಇದು ಈಗ ಬಳಕೆಯಲ್ಲಿರುವ ಕನ್ನಡದ ಉಪಭಾಷೆ (dialect)ಗಳಲ್ಲಿಯೇ ಅತಿ ಹೆಚ್ಚು ಹಳೆಗನ್ನಡ ಪದಗಳ ಬಳಕೆಯನ್ನು ಹೊಂದಿದೆ. ಹಾಗಾಗಿ ನನಗಾಗಿ ಯಾರೂ ಇಲ್ಲಿ ಕನ್ನಡ ಪದಗಳ ಪಟ್ಟಿ ಮಾಡುವ ಅವಶ್ಯಕತೆಯಿಲ್ಲ. ದಯವಿಟ್ಟು ಜಾತಿಯ ಆಧಾರದ ಮೇಲೆ ಚರ್ಚೆ ಮುಂದುವರೆಸಬೇಡಿ.

ಅಂತು ನಿನ್ನ ಬ್ರಾಂಬ್ರು ಗುಣ ಯ್ಯಾಂಗೆ ಬಿಟ್ಕೊಡ್ತಿಯೋ ಯಪ್ಪ. "ನಾನೊಬ್ಬ ಕನ್ನಾಡಿಗ" ಎಂದು ನೇರವಾಗಿ ಹೇಳ್ಕಾಗ್ಲಿಲ್ಲ ನೋಡ್ ನಿಂಗೆ. ಅದಕ್ಕೇ ನಾನು ಮೇಲಿನ ಮಾತನ್ನು ಬರೆದಿದ್ದು... ಸರಿ ನೀವೇ ದೊಡ್ಡ ಮಂದಿಯಪ್ಪ.
ಬಾರಿ ತಿಳ್ಕಂಡಿ ಬಿಡು.......

Unknown ಹೇಳಿದರು...

@@....
ಇಲ್ಲಿ ಕೆಲವು ಬೀದಿ ನಾಯಿಗಳು "ಹಚ" ಎಂದರೆ "ಅಚ್ಛಾ" ಎಂದು ಬಂದು ಬೊಗಳುತ್ತಿವೆ. ಅವುಗಳ ಜೊತೆ ದನಿಗೂಡಿಸುವ, ಅವುಗಳ ಕೂಗಿಗೆ ಉತ್ತರಿಸುವ ಗೋಜಿಗೆ ನಾನು ಹೋಗುವುದಿಲ್ಲ. ಆದರೆ ಚರ್ಚಿಸಬಯಸುವ ಎಲ್ಲರಿಗೂ ಕೆಲ ಕಿವಿಮಾತುಗಳನ್ನು .......

ಸಬ್ಯತೆಯ ಮಾತಾಡುವವರು ಈಗೆಲ್ಲಾ ಮಾತಾಡ ಬಹುದೇ...
ಆಗಾದರೆ ಹಚ್ಚ ಎಂದು ಬೊಗಳುವ ನಾಯಿಗೂ ಅಚ್ಚ ಎನ್ನುವ ನಾಯಿಗೂ ಹೊರಚ್ಚು ಏನು? ಹ ಹ ಹ ಹ ಹ ಹ.. ಹುಚ್ಚು ನಾಯಿಗಳು ಈಗೆ ತಾನೆ ಬೊಗಳಿದಂತೆ ಬೊಗಳುವುದು........

ಕುಕೂಊ.. ಹೇಳಿದರು...

@@
"ಚಿಕ್ಕಂದಿನಿಂದ ಕನ್ನಡ ಪದಗಳನ್ನು ತಿಳಿಸಿ ಮಕ್ಕಳನ್ನು ಬೆಳೆಸಿದರೆ ಕನ್ನಡವನ್ನು ಮತ್ತೆ ಬೆಳೆಸಬಹುದೇನೋ. ಅದು ಬಿಟ್ಟು ಅಕ್ಷರಗಳನ್ನು ತೆಗೆದು ಹೀಗೇ ಮಾತನಾಡಿ ಎಂದು ಬಲವಂತವಾಗಿ ಹೇರಬಾರದು"

ಈಗೇ ಬರೆಯ ಬೇಕು ಈಗೇ ಉಲಿಯ ಬೇಕು ಎನ್ನುವ ಹೆಚ್ಚು ಒತ್ತಡ ಇರುವುದು ಇಂದೇ, ಹೆಚ್ಚು ಹೊರೆಯಾಗಿರುವುದು ಇಂದೇ. ಈಗ ಆಗುತ್ತಿರುವುದೇ ಇದು ನಿಮ್ಮ ತಿಳುವಳಿಕೆಯನ್ನ ಒರೆ ಇಟ್ಟು ನೋಡಿಕೊಳ್ಳಿ. ತಪ್ಪೆಂದುಕೊಳ್ಳದಿದ್ದರೆ ಶಂಕರ ಬಟ್ಟರ ಎಂಟೂ ಹೊತ್ತಿಗೆಗಳನ್ನು ಓದಿಲ್ಲದಿದ್ದರೆ ಓದಿ . ಓದಿದ್ದರೆ ಇನ್ನೊಮ್ಮೆ ಓದಿ. ಅಲ್ಲಿ ಯಾವುದೂ ಗಾಳಿಯಲ್ಲಿ ತೂರಿದ ಮಾತಿಲ್ಲ. ಎಲ್ಲದನ್ನೂ ಸರಿಯಾಗಿ ತಿಳಿಹಚ್ಚಿ ಹುಡುಕಾಡಿ ಕಟ್ಟಳೆಯ ಮೇಲೆ ಬಿಡಿಸಿ ಬರೆದಿದ್ದಾರೆ. ಹತ್ತಾರು ನುಡಿಗಳ ತುಲನೆ ಮಾಡಿ ತೋರಿಸಿದ್ದಾರೆ. ಹೊತ್ತಿಗೆಯ ಕೊನೆಯಲ್ಲಿ ಹತ್ತಾರು ಎರವಲು ಹೊತ್ತಿಗೆಗಳನ್ನು ಪಟ್ಟಿಮಾಡಿದ್ದಾರೆ ಅವನ್ನೂ ಓದಿ. ಅದರೆ ಮೇಲೆ ನಿಮ್ಮ ಮಾತು ನಿಮಗೆ ನಮ್ಮ ಹಾದಿ ನಮಗೆ.

ಕುಕೂಊ.. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಕುಕೂಊ.. ಹೇಳಿದರು...

@@
ಸಂಸ್ಕೃತ ಪದಗಳ ಬದಲು ಇರುವ ಕನ್ನಡ ಪದಗಳನ್ನು ಬಳಸಿ, ಆದರೆ ಅದು ಸಾಧ್ಯವಾಗದಿದ್ದರೆ ಸರಿಯಾಗಿ ಮೂಲ ಪದ ಬಳಸಿ ಎಂದು
ಈ ಕಟ್ಟಳೆ ಯಾವ ಬಾಸೆಯಲ್ಲು ಇಲ್ಲ. ಅವರ ನುಡಿಯ ವ್ಯಾಕರಣದ ಒಳನೆಗಳ್ಚುವಿಗೆ ಹೊಂದಿಕೊಳ್ಳುವಂತೆ ಬದಲಿಸಿ ಕೊಂಡು ಒರೆಯನ್ನು ಬಳಸುತ್ತಾರೆ. ಸಿಂದಿ, ಹಿಂದಿ, ಪ್ರಾಕ್ರುತ, ಮರಾಟಿ, ಗುಜರಾತಿ,ಇಂಬ್ಲೀಚ್ ಮುಂತಾದ ನುಡಿಗಳನ್ನು ನೋಡಬಹುದು. ನಾನು ಇವತ್ತು ಪುಣೆಯಲ್ಲಿ ಇರುವುದು. ಮರಾಟಿಯಲ್ಲಿರುವ ತುಂಬಾ ಒರೆಗಳು ಸಕ್ಕದವೆ.ಮರಾಟಿಯನ್ನು ಕೇಳಿದ ನನ್ನ ತಿಳಿವಿನಂತೆ ಹೇಳುವುದಾದರೆ ನೂರಕ್ಕೆ ಎಂಬತ್ತಕ್ಕಿಂತ ಹೆಚ್ಚು ಸಕ್ಕದ ಒರೆಗಳನ್ನು ಮರಾಟಿ ನುಡಿಗೆ ಹೊಂದಿಕೊಳ್ಳುವಂತೆ ಬದಲಿಸ ಬಳಸುತ್ತಾರೆ. ಬೆರೆಲ್ಲ ನುಡಿಯಲ್ಲಿ ಹೀಗೆಯಾಕೆ ಬದಲಿಸಿ ಬಳಸುತ್ತಾರೆ? ಇದು ಇವತ್ತಿನ ಬೇರೆ ನುಡಿಯ ನೆಲೆಯಾಗಿದೆ. ಹಾಗೆಂದ ಮೇಲೆ ಕನ್ನಡಕ್ಕೆ ಯಾಕೆ ಈ ಕಟ್ಟಳೆ? ನೀವು ಒಮ್ಮೆ ತಿಳಿವಿನಿಂದ ನೋಡಿಕೊಳ್ಳಿ. ಹಳೆಗನ್ನಡ ನಡುಗನ್ನಡ ಏಕಾಯಿತು? ನಡುಗನ್ನಡ ಹೊಸಕನ್ನಡವಾಗಿ ಇಂದು ಯಾಕೆ ಬದಲಾಗಿದೆ? ಕನ್ನಡದಲ್ಲೇ ಯಾಕೆ ಎರವಲು ಪಡೆದ ನುಡಿಯ ಒರೆಯಂತೆ ನಾನು ಬಳಸಬೇಕು? ಈ ಕಟ್ಟಳೆ ನನಮಗೊಂದೇ,ಕನ್ನಡಕ್ಕೊಂದೇ ಯಾಕೆ?.....

Harisha - ಹರೀಶ ಹೇಳಿದರು...

ಕುಮಾರಸ್ವಾಮಿಯವರೇ, ಯಾವ ಭಾಷೆಯಲ್ಲಿ ಪದಗಳಿಲ್ಲವೋ ಅವರು ಬೇರೆ ಭಾಷೆಯಿಂದ ಎರವಲು ಪಡೆಯುತ್ತಾರೆ. ಮರಾಠಿ, ಹಿಂದಿ ಎಲ್ಲವೂ ಅಷ್ಟೆ. ಸ್ವಂತ ಪದಗಳು ಕಡಿಮೆ. ಕನ್ನಡ ಹಾಗಲ್ಲ, ತನ್ನದೇ ಆದ ಸಮೃದ್ಧ ನುಡಿಸಂಪತ್ತನ್ನು ಹೊಂದಿದೆ. ಬೇರೆಯವರಲ್ಲಿ ಬೇಡುವ ಅವಶ್ಯಕತೆಯೇನಿದೆ? ಅಂದ ಮೇಲೆ ಕೈಚಾಚುವುದೇಕೆ? ಅದರ ಅಗತ್ಯವೇನು? ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದಾದಲ್ಲಿ ತೆಗೆದುಕೊಳ್ಳೋಣ. (ಉದಾ: ನೀರು, ಚಿತ್ತಾರ ಇವುಗಳಿಗೆ ಅಚ್ಚ ಕನ್ನಡ ಪದ ಇದ್ದರೆ ತಿಳಿಸಿ ಎಂದು ನನ್ನ ಈ ಲೇಖನದಲ್ಲಿ ಬರೆದಿದ್ದೇನೆ. ಅದಕ್ಕೆ ಯಾರೂ ಉತ್ತರಿಸುವ ಗೋಜಿಗೆ ಹೋಗಿಲ್ಲ. ನನಗೆ ತಿಳಿದಂತೆ ನೀರಿಗೆ ಅಚ್ಚ ಕನ್ನಡ ಪದವಿಲ್ಲ. ಸಂಸ್ಕೃತದ "ನೀರ" ಎಂಬ ಪದವನ್ನು ನೀರು ಎಂದು ತದ್ಭವಗೊಳಿಸಿ ಬಳಸಲಾಗುತ್ತಿದೆ. ಅದಕ್ಕೆ ಯಾರದ್ದೂ ತಕರಾರಿಲ್ಲ)

ಕನ್ನಡ ಪದಗಳ ಬಗ್ಗೆ ಇಷ್ಟೊಂದು ಕೊಚ್ಚಿಕೊಳ್ಳುತ್ತಿರುವ ನೀವು "ನುಡಿ" ಏಕೆ ಬಳಸುತ್ತಿಲ್ಲ? "ಭಾಷೆ" (ಅಥವಾ ಅದರ ವಿರೂಪ) ನಿಮಗೆ ಆಪ್ತ ಎನಿಸುತ್ತಿದೆಯೇ? ಸಂಸ್ಕೃತವನ್ನು promote ಮಾಡುತ್ತಿರುದೇಕೆ? ಅದಕ್ಕೆ ಒತ್ತಾಸೆಯಾಗಿರುವುದೇಕೆ? ಮೇಲೆ ವಿಕಾಸ್ ಹೇಳಿರುವ ಅನಿಸಿಕೆ ಒಮ್ಮೆ ಓದಿ: "ಸುಮ್ಮನೇ ಸಂಸ್ಕೃತವನ್ನು ಹೊರಗಿಡಬೇಕು ಎಂದು ಹೇಳುವವರು ಅದರ practicality ಬಗ್ಗೆ ಚಿಂತಿಸುವುದಿಲ್ಲ. ಹಾಗೆ ಹೇಳುವವರಿಗೇ ತಮ್ಮ ಅಭಿಪ್ರಾಯವನ್ನು ಸಂಸ್ಕೃತ ಪದಗಳನ್ನು ಹೊರಗಿಟ್ಟು ಹೇಳಲು ಬರುವುದಿಲ್ಲ". ಇದು ನಿಮಗೂ ಅನ್ವಯಿಸುತ್ತದೆ ಎಂದು ನಿಮಗೆ ಅರಿವಾಗುತ್ತಿಲ್ಲವೇ? ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅಚ್ಚ ಕನ್ನಡ ಬಳಸಿ. ಅರ್ಥ ಮಾಡಿಕೊಳ್ಳಲು ನಾನಿದ್ದೇನೆ. ತಿಳಿಯದಿದ್ದರೆ ಇನ್ನೊಬ್ಬರನ್ನು ಕೇಳಿ, ಹೊತ್ತಿಗೆಗಳನ್ನು ಓದಿಯಾದರೂ ತಿಳಿದುಕೊಳ್ಳುತ್ತೇನೆ. (ನಿಮ್ಮ ವಿವರದಲ್ಲಿ ಬರೆದಿರುವ ಅಗೋಚರ ಬದಲು ಕಾಣದ, ಶಕ್ತಿಯ ಬದಲು ಅಟಾಪ, ಅಳವು, ಕಸುವು ಎಂದು ಬರೆಯಿರಿ. ತಿಳಿಯದಿದ್ದವರಿಗೆ ಇದು ಕನ್ನಡ, ಎಂದು ಅದರ ಅರ್ಥ ತಿಳಿಸಿ).

ಕುಕೂಊ.. ಹೇಳಿದರು...

ನನ್ನ ಅರಿವಿಗೆ ಬಾರದೆ ಕೆಲವು ಸಕ್ಕ ಹಾಗು ಇನ್ಯಾವುದೊ ನುಡಿಯ ಒರೆಗಳು ನನ್ನ ನುಡಿಯಲ್ಲಿ ನುಸಿಳಿರ ಬಹುದು. ಇದಕ್ಕೆ ನೆಪ ನೂರಾರು ಏಡುಗಳ ಪಳಕ. ಇಲ್ಲ ಇನ್ಯಾರಿಗೋ ತಿಳಿಗೊಳ್ಳಲು ಬಳಸಿರುವವು.
@@
"ಕನ್ನಡ ಪದಗಳ ಬಗ್ಗೆ ಇಷ್ಟೊಂದು ಕೊಚ್ಚಿಕೊಳ್ಳುತ್ತಿರುವ ನೀವು "ನುಡಿ" ಏಕೆ ಬಳಸುತ್ತಿಲ್ಲ? "ಭಾಷೆ" (ಅಥವಾ ಅದರ ವಿರೂಪ) ನಿಮಗೆ ಆಪ್ತ ಎನಿಸುತ್ತಿದೆಯೇ?"

ಇಟೊಂದು ಬೊಂಕು ಕೊಚ್ಚುವ ನೀವು ನನ್ನ ಬರಹವನ್ನು ಇನ್ನೊಮ್ಮೆ ಓದಿ.
ನೀನೇಳಿದ ಮಾತು ತಿರುಗೆ ಒಮ್ಮೆ ನೆನಪಿಸಿ ಕೋ "ಜಾಣ ಕುರುಡು"
ನನ್ನ ತನದ ಬಗ್ಗೆ ನಾನು ಕೊಚ್ಚಿಕೊಳ್ಲದೆ ಪಕ್ಕದ ಹಾದರಗಿತ್ತಿ ಬಂದು ಕೊಚ್ಚಿಕೊಲ್ಳಲಾರಳು.
@@
ಕನ್ನಡಕನ್ನಡ ಹಾಗಲ್ಲ, ತನ್ನದೇ ಆದ ಸಮೃದ್ಧ ನುಡಿಸಂಪತ್ತನ್ನು ಹೊಂದಿದೆ. ಬೇರೆಯವರಲ್ಲಿ ಬೇಡುವ ಅವಶ್ಯಕತೆಯೇನಿದೆ? ಅಂದ ಮೇಲೆ ಕೈಚಾಚುವುದೇಕೆ? ಅದರ ಅಗತ್ಯವೇನು? ಕನ್ನಡದಲ್ಲಿ ಇಲ್ಲವೇ ಇಲ್ಲ ಎಂದಾದಲ್ಲಿ ತೆಗೆದುಕೊಳ್ಳೋಣ

ಬೇರೆಯದನ್ನು ನಮ್ಮತನಕ್ಕೆ ಹೊಡೆತ ಬೀಳದಂತೆ ಬಳೋಸೋಣ ಈ ಮಾತನ್ನು ಮೊದಲೇ ಹೇಳಿರುವೆ.

@@
(ನಿಮ್ಮ ವಿವರದಲ್ಲಿ ಬರೆದಿರುವ ಅಗೋಚರ ಬದಲು ಕಾಣದ, ಶಕ್ತಿಯ ಬದಲು ಅಟಾಪ, ಅಳವು, ಕಸುವು ಎಂದು ಬರೆಯಿರಿ. ತಿಳಿಯದಿದ್ದವರಿಗೆ ಇದು ಕನ್ನಡ, ಎಂದು ಅದರ ಅರ್ಥ ತಿಳಿಸಿ)

ಶಕ್ತಿ, ಅಗೋಚರ, ಈ ಒರೆಗಳು ನನ್ನ ಬರಹದಲ್ಲಿ ಎಲ್ಲಿವೆಯೋ ನನಗಂತು ತಿಳಿಯದು. ಕೆಲವು ಬೇರೆ ನುಡಿ ಒರೆ ಬಳಸಿದ್ದರೂ ಅದು ನನಗಿರುವ ಕನ್ನದೆಡೆಗಿನ ಅರೆತಿಳುವಳಿಕೆ. ನನ್ನ ಹಳೆ ಕಬ್ಬ ಬರಹದಲ್ಲಿ ನುಸಿಳಿರುವ ಇಂತಹ ಬೇರೆ ನುಡಿಯ ಒರೆಗಳಿಗೆ ಅಂತಹ ಒಂದು ಅರೆ ತಿಳುವಳಿಕೆ ನೆಪ.
ನಾನು ಇವತ್ತು ಮಾತನಾಡುತ್ತಿರುವುದು ಮೇರೆಯಿಲ್ಲದೆ ಮುತ್ತಿರುವ ಬೇರೆ ನುಡಿಯ ಒರೆಗಳ ಬಗ್ಗೆ. ಓದಲು ಬರೆಯಲು ತೊಂದರೆಗೀಡುಮಾಡುವ ಹೊಟ್ಟೆಉಲಿಕೆಯ(ಏರುಉಲಿಕೆಯ) ಒರೆಗಳ ಬಗ್ಗೆ. ಹತ್ತಾರು ನೂರೇಡುಗಳಿಂದ ಪಳಕಗೊಂಡಿರುವ ಬಾಯಿ, ಕಯ್ ಒಮ್ಮೆಲೆ ಬೇರೆಯದಕ್ಕೆ ಹೊಂದಿಕೊಂಡು ಹೊಗಲಾರವು. ಈ ಅಳತೆಯಲ್ಲಿ ನಾನು ಬರುತ್ತೇನೆ. ಬೇರೆ ನುಡಿಗಳ ಒರೆ ಬಳಕೆಯ ಬಗ್ಗೆ ನನಗೆ ಕೇಡಿಲ್ಲ. ಅಳತೆ ಮೀರಿ ನಮ್ಮತನ ಮಣ್ಣುಮುಕ್ಕುತಿರುವುದರ ಬಗ್ಗೆ ಕಿಚ್ಚಿದೆ. ತಿಳುವಳಿಕೆಯ ಕಣ್ಣು, ಮೂಗು ಮುಚ್ಚಿದವರಿಗೆ ಏನು ತೋರಿಸಲಾಗದು, ಕಾಣಿಸಲಾಗದು. ನನಗೆ ನನ್ನ ಕನ್ನಡದ ಬಗ್ಗೆ ನನ್ನತನದ ಬಗ್ಗೆ ಕೊಚ್ಚಿಕೊಳ್ಳುವುದಕೆ ಎಲ್ಲಿಲ್ಲದ ಹೆಮ್ಮೆ. ಸಕ್ಕದ ಒರೆಗಳನ್ನು ಸಕ್ಕದವರುಲಿಯುವಂತೆ ಉಳಿಯಬೇಕೆನ್ನುವ ಮೊಂಡು ಮಡಿವಂತಿಕೆ ನನಗಿಲ್ಲ. ಇಲ್ಲದನ್ನು ನಮ್ಮತನಕ್ಕೆ ಹೊಡೆತ ಬೀಳದಂತೆ ಬಳಸುವ, ತೆಗದುಕೊಳ್ಳುವ ಎದಗಾರಿಕೆ ಇದೆ. ಬೇರೆಯದು ಎಲ್ಲೆ ಇಲ್ಲದೆ ಮುತ್ತಿ ಮಾಸುತ್ತಿರುವ ನಮ್ಮತನದ, ಕನ್ನಡತನದ ಬಗ್ಗೆ ನಾನು ಹೇಳಿಕೊಂಡಿದ್ದು, ನನ್ನತನದ ಬಗ್ಗೆ ಕೊಂಚ್ಚಿಕೊಂಡಿದ್ದು. ಅದೇ ನನಗೆ ಹೆಮ್ಮೆ. ನನಗೆ ಎಲ್ಲಾ ತಿಳಿದಿದೆ ಎಂದು ಇಲ್ಲದ ಒಣ ಬೊಂಕು ಕೊಚ್ಚುವ ಹುಚ್ಚುತನ ನನಗಿಲ್ಲ.

@@

"ತಿಳಿಯದಿದ್ದವರಿಗೆ ಇದು ಕನ್ನಡ, ಎಂದು ಅದರ ಅರ್ಥ ತಿಳಿಸಿ"

ನಾನು ಈಗ ಮಾಡ ಹೊರೆಟಿರುವುದೇ ಅದು ನನ್ನ ಕಯ್ಗೆ ನಿಲುಕುವಂತೆ ನಾನು ಮಾಡುತ್ತಿರುವೆ. ಮಾಡುವೆ.

@@

"(ಉದಾ: ನೀರು, ಚಿತ್ತಾರ ಇವುಗಳಿಗೆ ಅಚ್ಚ ಕನ್ನಡ ಪದ ಇದ್ದರೆ ತಿಳಿಸಿ ಎಂದು ನನ್ನ ಈ ಲೇಖನದಲ್ಲಿ ಬರೆದಿದ್ದೇನೆ. ಅದಕ್ಕೆ ಯಾರೂ ಉತ್ತರಿಸುವ ಗೋಜಿಗೆ ಹೋಗಿಲ್ಲ. ನನಗೆ ತಿಳಿದಂತೆ ನೀರಿಗೆ ಅಚ್ಚ ಕನ್ನಡ ಪದವಿಲ್ಲ. ಸಂಸ್ಕೃತದ "ನೀರ" ಎಂಬ ಪದವನ್ನು ನೀರು ಎಂದು ತದ್ಭವಗೊಳಿಸಿ ಬಳಸಲಾಗುತ್ತಿದೆ. ಅದಕ್ಕೆ ಯಾರದ್ದೂ ತಕರಾರಿಲ್ಲ)"

ನೀರು ಕನ್ನಡದ್ದೋ ಇನ್ಯಾರದ್ದೋ ನನಗೆ ಈಗ ತಿಳಿದಿಲ್ಲ. ಅದಕ್ಕೆ ಏನು ಬಿಡಿಸ ಹೇಳಲಾರೆ. ನೀರು ಕನ್ನಡದಲ್ಲದಿದ್ದರೆ ಕನ್ನಡದಲ್ಲೊಂದು ಒಂದು ಒರೆ ಇರಲೇ ಬೇಕು ಇದು ದಿಟ. ಯಾಕೆಂದರೆ ನೀರು ನೆಲ, ಗಾಳಿ ಬಾನು ಬಯಲಂತೆ ಬದುಕಿನಲ್ಲಿ ಬರುವ ಒಂದು ಮೊದಲ ಕೋಗು. ಎಲ್ಲಾ ಬೇರು ನುಡಿಯಲ್ಲಿ ನೀರಿಗೆ ಒಂದು ಒರೆ ಇರಲೇ ಬೇಕು. ಇದು ನನ್ನ ದಿಟ ಅನಿಸಿಕೆ. ಈ ನಿಟ್ಟಿನಲ್ಲಿ ನನ್ನ ತಿಳುವಳಿಕೆಯನ್ನು ಮೊದಲು ಮಾಡಿ ಹುಡುಕುವೆ. ಇಂತಹ ಒಳ್ಳೆಯದನ್ನು ನೆನಪಿಸಿದ್ದಕ್ಕೆ ನನ್ನಿ.
ನಿಮಗೆ ಅಡ್ಡ ಬಿದ್ದೆ.

Harisha - ಹರೀಶ ಹೇಳಿದರು...

>> ಇದಕ್ಕೆ ನೆಪ ನೂರಾರು ಏಡುಗಳ ಪಳಕ. ಇಲ್ಲ ಇನ್ಯಾರಿಗೋ ತಿಳಿಗೊಳ್ಳಲು ಬಳಸಿರುವವು.

ಎಲ್ಲರೂ ಹಾಗೆ ಮಾಡ್ತಿರೋದ್ರಿಂದ್ಲೇ ಅಲ್ವೇ ಕನ್ನಡಕ್ಕೆ ದುಃಸ್ಥಿತಿ ಬಂದಿರೋದು? ನಿಮ್ಮ ಪ್ರಕಾರ ನಾವೆಲ್ಲ ಮಡಿವಂತರು, ಬಳಸ್ತೀವಿ. ಕನ್ನಡದ ಉಟ್ಟು ಓರಾಟಗಾರ ಆಗಿರುವ ನೀವೂ ಹೀಗೆ ಮಾಡಬಹುದೆ?

>> ಬೇರೆಯದನ್ನು ನಮ್ಮತನಕ್ಕೆ ಹೊಡೆತ ಬೀಳದಂತೆ ಬಳೋಸೋಣ

ಅದೇ ಏಕೆ? ಬೇರೆಯದರ ಉಸಾಬರಿ ನಿಮಗೇಕೆ? ಕನ್ನಡ ಪದ ಇಲ್ಲದಾದಾಗ ಅದು ಸರಿ, ಇದ್ದಾಗ ಏಕೆ?

>> ಶಕ್ತಿ, ಅಗೋಚರ, ಈ ಒರೆಗಳು ನನ್ನ ಬರಹದಲ್ಲಿ ಎಲ್ಲಿವೆಯೋ ನನಗಂತು ತಿಳಿಯದು.

ನೀವು ಬರೆದಿದ್ದೆ ನಿಮಗೆ ತಿಳಿದಿರುವುದಿಲ್ಲ. ಇನ್ನು ಭಾಷೆ ಉದ್ಧಾರ ಮಾಡೋದೆಲ್ಲಿಂದ ಬಂತು? ಇಲ್ಲಿ ನೋಡಿ, About me ಅಂತ ಇದ್ಯಲ್ಲಾ, ಅದರ ಮೇಲೊಮ್ಮೆ ಕಣ್ಣು ಹಾಯಿಸಿ.

>> ಹತ್ತಾರು ನೂರೇಡುಗಳಿಂದ ಪಳಕಗೊಂಡಿರುವ ಬಾಯಿ, ಕಯ್ ಒಮ್ಮೆಲೆ ಬೇರೆಯದಕ್ಕೆ ಹೊಂದಿಕೊಂಡು ಹೊಗಲಾರವು.

ಅದನ್ನೇ ರೀ ನಾನೂ ಇಷ್ಟ್ ಹೊತ್ತು ಬಡಕೊಂಡಿದ್ದು... ಈಗಲಾದರೂ ಸ್ವಲ್ಪ ನಿಮ್ ತಲೆ ಒಳಗೆ ಹೋಯ್ತಲ್ಲ.. ಒಮ್ಮೆಲೇ ಮಹಾಪ್ರಾಣ ತೆಗೆದುಬಿಡುವುದಲ್ಲ.. ಮೊದಲು ಕನ್ನಡ ಪದಗಳ ಬಳಕೆ ಹೆಚ್ಚಿಸೋಣ. ಅದಾದ ಮೇಲೆ ಬೇಕಾದರೆ ವರ್ಣಮಾಲೆಗೆ ಕತ್ತರಿ ಆಡಿಸೋ ಕೆಲಸ ಮಾಡೋಣ.

>> ಇಲ್ಲದನ್ನು ನಮ್ಮತನಕ್ಕೆ ಹೊಡೆತ ಬೀಳದಂತೆ ಬಳಸುವ, ತೆಗದುಕೊಳ್ಳುವ ಎದಗಾರಿಕೆ ಇದೆ.

ನೀವು ತೆಗೆದುಕೊಂಡರೆ ಎದೆಗಾರಿಕೆ, ನಾವು ತೆಗೆದುಕೊಂಡರೆ ಮಡಿವಂತಿಕೆಯೆ? ಅಷ್ಟಕ್ಕೂ ನೀವು ತೋರಿಸುತ್ತಿರುವುದು ಎದೆಗಾರಿಕೆಯಲ್ಲ, ಮೊಂಡುತನ.

>> ಬೇರೆ ನುಡಿಗಳ ಒರೆ ಬಳಕೆಯ ಬಗ್ಗೆ ನನಗೆ ಕೇಡಿಲ್ಲ. ಅಳತೆ ಮೀರಿ ನಮ್ಮತನ ಮಣ್ಣುಮುಕ್ಕುತಿರುವುದರ ಬಗ್ಗೆ ಕಿಚ್ಚಿದೆ.

"ಹಾವೂ ಸಾಯಬೇಕು. ಕೋಲೂ ಮುರೀಬಾರದು"
"ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ"
ಇನ್ನೂ ಏನೇನೋ ಗಾದೆಗಳಿವೆ... ವಿರೋಧಾಭಾಸ... ಇದಕ್ಕೆ ಕನ್ನಡ ಪದ ಏನು? (ವಿರೋದಾಬಾಸ ಅನ್ಬೇಡಿ ಮತ್ತೆ!)

>> ನನ್ನ ಹಳೆ ಕಬ್ಬ ಬರಹದಲ್ಲಿ ನುಸಿಳಿರುವ ಇಂತಹ ಬೇರೆ ನುಡಿಯ ಒರೆಗಳಿಗೆ ಅಂತಹ ಒಂದು ಅರೆ ತಿಳುವಳಿಕೆ ನೆಪ.

"ಕಳ್ಳನಿಗೊಂದು ಪಿಳ್ಳೆ ನೆವ" ಅಂತನೂ ಒಂದು ಗಾದೆ ಇದೆ ಸ್ವಾಮಿಗಳೇ...

>> ನಾನು ಈಗ ಮಾಡ ಹೊರೆಟಿರುವುದೇ ಅದು ನನ್ನ ಕಯ್ಗೆ ನಿಲುಕುವಂತೆ ನಾನು ಮಾಡುತ್ತಿರುವೆ. ಮಾಡುವೆ.

ಸಂತೋಷ.

>> ಈ ನಿಟ್ಟಿನಲ್ಲಿ ನನ್ನ ತಿಳುವಳಿಕೆಯನ್ನು ಮೊದಲು ಮಾಡಿ ಹುಡುಕುವೆ.

ನೀರು ಎಂಬ ಒಂದೇ ಪದವಲ್ಲ. "ಚಿತ್ತಾರ" ಕೂಡ "ಚಿತ್ರ"ದ ತದ್ಭವ ರೂಪ.. ಅದಕ್ಕೂ ಕನ್ನಡ ಪದ ಹುಡುಕಿ. ಬರಿ ಹುಡುಕಿಬಿಟ್ಟರೆ ಆಗಲಿಲ್ಲ, ಅವುಗಳನ್ನೇ ಬಳಸಿ. ಅದು ಮುಗಿದ ಮೇಲೆ ಹೇಳಿ.. ಇನ್ನೂ ಕೆಲವು ಪದಗಳನ್ನು ತಿಳಿಸುವೆ.

ಕುಕೂಊ.. ಹೇಳಿದರು...

ಆಗಲೇ ಮೂರು ಬಾರಿ ಹೇಳಿದೆನಲ್ಲ ನಿನ್ನ ಅಡಿನೇ ದೊಡ್ಡದು... ಮೊದಲ ಬಾರಿಗೆ ಹೇಳಿರುವೆ ನನ್ನ ಹಳೆ ಬರಹ ಕಬ್ಬದಲ್ಲಿ ಬೇರೆ ನುಡಿಯ ಹೊರೆಗಳು ಬಳಸಿರುವುದರ ಬಗ್ಗೆ ....ಶರಣು ಶಂಬು....ಅಡ್ಡ ಬಿದ್ದೆ

Unknown ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Harisha - ಹರೀಶ ಹೇಳಿದರು...

ಕುಮಾರಸ್ವಾಮಿ ಅವರೇ, ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರಲ್ಲ. ಯಾರು ಯಾರಿಗೂ ಅಡ್ಡ ಬೀಳುವುದೂ ಬೇಡ. ಸುಮ್ಮನೆ ಕನ್ನಡ ಕನ್ನಡ ಎಂದು ಶಂಕರ ಭಟ್ಟರ ವಾದ ವಿರೋಧಿಸುವ ಎಲ್ಲರ ಮೇಲೂ ನಾಲ್ಕು ಜನರು ಸೇರಿ ಕೂಗಾಡುತ್ತಾ, ಬಯ್ಯುತ್ತಾ ಅವರನ್ನು ನಿಂದಿಸುವುದಲ್ಲ. ನಿಮ್ಮಲ್ಲಿರುವ ಒಂದೊಂದೇ ಹುಳುಕನ್ನು ತೆಗೆದು ಬರೆದಾಗ ಯಾಕಿ ಬಾಯಿ ಮುಚ್ಚಿ ಬಿಟ್ಟಿರಿ? ಸತ್ಯ ಅರಗಿಸಿಕೊಳ್ಳಲು ಕಷ್ಟವಾಯಿತೆ ಅಥವಾ ಬಣ್ಣ ಬಯಲಾಯಿತು ಎಂದು ದಿಗಿಲಾಯಿತೆ? ನಾನು ಬರೆದಿರುವ ಈ ಲೇಖನದ ಯಾವೊಂದು ಪ್ರಶ್ನೆಗೂ ನಿಮ್ಮಿಂದ ಉತ್ತರ ಸಿಕ್ಕಿಲ್ಲ. ಬೇಕಿದ್ದರೆ ಮತ್ತೆ ಓದಿ ನೋಡಿ.

FYI, ನಿಮ್ಮ About me ಯ "ಅಗೋಚರ ಶಕ್ತಿ" ಇನ್ನೂ ಹಾಗೇ ಇದೆ...

Accha.. ಬೊಗಳಿ..

Unknown ಹೇಳಿದರು...

ಬಾವಿ ಕಪ್ಪೆ..........ಬಡಾಯಿ ಕೊಚ್ಚಿಕೊಳ್ಳೊದು ಬಿಡು
ಚಿತ್ರ-ತಿಟ್ಟ

ಕುಕೂಊ.. ಹೇಳಿದರು...

ಆಡಿದ್ದೇ ಆಡೋ ಕಿಸಿಬೇ ದಾಸಯ್ಯ ಅಂತ ಹೇಳಿದ್ದೇ ಹೇಳೋಕೆ ನನಗೆ ಆಗಲ್ಲ.
FYI, ನಿಮ್ಮ About me ಯ "ಅಗೋಚರ ಶಕ್ತಿ" ಇನ್ನೂ ಹಾಗೇ ಇದೆ...

ಇದು ಈಗೇ ಇರುತ್ತೆ ನಾನು ಬೆಕೆಂದೇ ಬಿಟ್ಟಿರುವುದು. ಮೊದಲು ನನಗೆ ತಿಳುವಳಿಕೆ ಇದ್ದಿಲ್ಲ ಅನ್ನುವುದನ್ನು ತೋರಿಸಿಕೊಳ್ಳುವುದಕ್ಕೆ. ನಾನು ಬೇರೆ ನುಡಿಯ ಒರೆ ಬಳಸುತಿದ್ದುದ್ದನ್ನು ನಾನು ಮೊದಲೇ ಹೇಳಿರುವೆ. ಬಳಸಲೇ ಬಾರೆದೆಂದು ಎಲ್ಲಿಯೂ ನಾನು ಹೇಳಿಲ್ಲ.ಮತ್ತೇ ಅದೇ ಮಾತನ್ನು ಹೇಳಲಾರೆ. ಇದನ್ನು ನಿಮ್ಮಂತ ಜಾಣರಿಗೆ ನಮ್ಮಂತ ದಡ್ಡತನ ಹುಡುಕಾಡಲಿಕ್ಕೆ ತೋರಿಸಲಿಕ್ಕೆ ಬಿಟ್ಟಿರುವುದು. ನನ್ನ ಹಳೆಯ ಎಲ್ಲಾ ಕವನದಲ್ಲೂ ಒರನುಡಿಗಳ ಒರೆಗಳು ಸಿಗುತ್ತವೆ. ನಿನ್ನ ಯಾವಮಾತಿಗೂ ಇನ್ನು ಎದುರು ಹೇಳಲು ಇಲ್ಲಿ ಹೊಸದು ಏನು ಇಲ್ಲ. ಹೇಳುವುದೆಲ್ಲ ಹೇಳಾಗಿದೆ. ಶಂಕರ ಬಟ್ಟರ ತರ.
ನನ್ನಜ್ಜ ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬಂತು "ಅದಲ್ಲೊ ಜೋಗಿ ಅಂದ್ರೆ ಅದೇ ಗುಡಿಹಿಂದೆ ಹೋಗಿ ಟಿಂಗ್ ಟಿಂಗ್ ಅನ್ನಿಸಿದಂಗೆ" ಅದಕ್ಕೆ ಇನ್ನು ಏನೂ ಉಳಿದಿಲ್ಲ ನಿನಗೆ ಹೇಳಲು
ಅಡ್ಡ ಬಿದ್ದೆ....
(ಸಕ್ಕದ ನಮಸ್ಕಾರಕ್ಕೆ ಕನ್ನಡದ ಅಡ್ಡಬಿದ್ದೆ)...

Unknown ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Harisha - ಹರೀಶ ಹೇಳಿದರು...

ಗುಡ್... ಅಂತೂ ಉಪಯೋಗ ಆಗೋ ಥರ ಒಂದು ಸಾಲು ಮಾತಾದಿದೀರಿ (ಮೊದಲನೆ ಸಾಲು ಉಪಯೋಗಕ್ಕೆ ಬಾರದ್ದೇ..)

ನೀರಿಗೂ ಹುಡುಕಿಬಿಡ್ರಲಾ...

Harisha - ಹರೀಶ ಹೇಳಿದರು...

ನನ್ನ ಹಿಂದಿನ ಅನಿಸಿಕೆ Accha ಅವರಿಗೆ.. ಏನ್ Accha ಅವರೇ.. ನನಗೆ ಬೈದ್ರೆ ಮಾತ್ರ comment ತೆಗೀತೀನಿ ಅಂದ್ಕೊಂಡ್ರಾ? ಇಲ್ಲ.. ಯಾರ ಮೇಲೆ ನೀವು ದಾಳಿ ನಡೆಸಿದರೂ ತಪ್ಪೇ.. ಹಂಗಾಗಿ ನಿಮ್ಮ ಇನ್ನೊಂದ್ ಅನಿಸಿಕೆನೂ ತೆಗ್ದಿದೀನಿ..

ಕುಮಾರಸ್ವಾಮಿಯವರೇ, ಬಹಳಷ್ಟು ವಿಷಯಗಳನ್ನ ಹೇಳಿದ್ದೀರಿ, ಒಪ್ದೆ... ಆದ್ರೆ ನನ್ನ ಬರಹದಲ್ಲಿರೋ ವಿಷಯದ ಮೇಲೆ ಅದೇನು ಹೇಳಿದೀರೋ ನನಗಂತೂ ಗೊತ್ತಾಗ್ಲಿಲ್ಲ. ಹೋಗ್ಲಿ ಬಿಡಿ.. ನಿಮ್ಮಿಷ್ಟ.. Accha ಅವರು ಕೊನೆಗೂ ತಮಗೆ ಬೊಗಳೋದಷ್ಟೇ ಅಲ್ಲ, ಅಷ್ಟಿಷ್ಟು ಕನ್ನಡನೂ ಬರುತ್ತೆ ಅಂತ ತೋರ್ಸಿದಾರೆ..