ಗುರುವಾರ 15 ಎಪ್ರಿಲ್ 2010

ದೂರ

ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?

ರವಿವಾರ 11 ಎಪ್ರಿಲ್ 2010

ಬಯಕೆ

ಕನವರಿಕೆಯ ಮಾತು ನಿನ್ನ ಮನದ ಮೂಲದಿ ತೆರೆಯಲಿ,
ಹಗಲುಗನಸಲಿನ್ನು ಎನ್ನ ನೆರಳು ನಿನಗೆ ತೋರಲಿ,
ಸಿಹಿನಗುವು ಮೂಡಲಿ ಇನ್ನು ನೀ..
ನನ್ನ ಸನಿಹ ಬಯಸಲಿ.