ಶುಕ್ರವಾರ, ಮಾರ್ಚ್ 30, 2012

ಮರಳಿದ ನೆನಪು

ಬಾ, ಗೆಳತಿ ಇಂದು ನಿನ್ನ ನೆನಪು ಹಸಿಯಾಗಿದೆ
ಅಂದೇ ಹಣ್ಣಾಗಿ ಮಾಗಿದ ಒಲವ ನೀ ನಲ್ಲೆ ಮರೆತೆಯಾ
ನಾ ಮರೆಯಲಾರೆನು.. ಎಂದೂ ನೀ ಬಾರದಾದೆಯಾ

ಸೂತ್ರ ಕಟ್ಟಿ ಹಾರಿಬಿಟ್ಟ ಗಾಳಿಪಟವು ಕಂಡಿದೆ
ಜಾತ್ರೆ ಪೇಟೆಯಲ್ಲಿ ಸುತ್ತಿ ಬಂದ ನೆನಪು ಕಾಡಿದೆ
ರಾತ್ರಿ ಚಂದ್ರನಲ್ಲಿ ಕೂಡ ನಿನ್ನ ಮೊಗವೆ ಮೂಡಿದೆ
ಬಾ, ಗೆಳತಿ ನನ್ನ ಮನವು ನಿನ್ನ ಬಳಿ ಓಡಿದೆ

ನಾವೆಯಲ್ಲಿ ಕೂತು ಹೋದ ನದಿಯ ದಂಡೆ ಕಾದಿದೆ
ಭಾವ ತುಂಬಿ ನೀನು ನುಡಿದ ಮಾತಿನಿಂದ ಬೆಂದಿದೆ
ನೋವಿನಿಂದ ಬೀಳುಕೊಟ್ಟ ದಿನವ ನೆನೆದು ನೊಂದಿದೆ
ಬಾ, ಗೆಳತಿ ನನ್ನ ಹೃದಯ ನಿನ್ನ ಬಳಿ ಬಂದಿದೆ

ಕಣ್ಣ ಒರೆಸಿ ಕಾಣೆಯಾದ ನಿನ್ನ ಬಗ್ಗೆ  ದೂರಿದೆ
ತಣ್ಣಗಾಗಿ ಹೇಳುವಂಥ ನನ್ನ ಕಥೆಯು ನೂರಿದೆ
ಬಣ್ಣ ಬಣ್ಣದಿಂದ ಇರುವ ಜೋಡಿ ಹಕ್ಕಿ ಹಾರಿದೆ
ಬಾ, ಗೆಳತಿ ನನ್ನ ಜೀವ ನಿನ್ನ ಜೊತೆ ಕೋರಿದೆ

(ಸ್ಫೂರ್ತಿ: ಜಯಂತ್ ಕಾಯ್ಕಿಣಿ ರಚಿಸಿರುವ ನೀನೆ ಬರಿ ನೀನೆ ಗುಚ್ಛದ ಸೋನು ನಿಗಮ್ ಹಾಡಿರುವ ಬಾ ನೋಡು ಗೆಳತಿ ನವಿಲುಗರಿಯು ಮರಿ ಹಾಕಿದೆ ಹಾಡು)

9 ಕಾಮೆಂಟ್‌ಗಳು:

ISHWARA BHAT ಹೇಳಿದರು...

ಆಹಾ, ಸೂಪರ್ :) ಎರಡೂ ಹಾಡು ತುಂಬಾ ಸುಂದರವಾಗಿದ್ದು :)

Harisha - ಹರೀಶ ಹೇಳಿದರು...

ಧನ್ಯವಾದ ಕಿರಣಣ್ಣಾ :)

ತೇಜಸ್ ಜೈನ್ Tejas jain ಹೇಳಿದರು...

ಶೃಂಗಾರ ಕವಿಗಳೇ.. ಸಕ್ಕತ್ತಾಗಿದೆ :)

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

Cholo iddu... idanna odida mele aa haadina gungu hidastu.. Super...

prashasti ಹೇಳಿದರು...

ಓ... ಹರೀಶಣ್ಣನ ಮನಸಲ್ಲಿ ಪ್ರೇಮದ ಅಲೆ :-) ಚೆಂದಿದ್ದೋ.. ಆ ಪ್ರಿಯೆ ಬೇಗ ಬರಲಿ :-)

sunaath ಹೇಳಿದರು...

ಹರೀಶರೆ,
ಪ್ರೇಮಭಾವವನ್ನು ಉಕ್ಕಿಸುವ ಗೇಯ ಗೀತೆ! ಯಾವ ಗೆಳತಿ ಬರದೆ ಸುಮ್ಮನೆ ಕೂತಾಳು?

ಸೋಮಶೇಖರ ಹುಲ್ಮನಿ ಹೇಳಿದರು...

ಹರೀಶ ,
ಅಬ್ಬ ಎಲ್ಲಿ ಇಟ್ಟಿದ್ಯೋ ಮಾರಾಯ ನಿನ್ನ ಈ ಕವಿತಾ (ನಿನ್ನ ಗರ್ಲ್ ಫ್ರೆಂಡ್ ಅಲ್ಲ) ಶಕ್ತಿನ !!!
ಯಾವುದಾದರು ಚಲನಚಿತ್ರಕ್ಕೆ ಕೊಡು ....

Harisha - ಹರೀಶ ಹೇಳಿದರು...

@ತೇಜಸ್:
ಹಾಗಂತ ಇಲ್ಲಿ ಯಾರೂ ಇಲ್ವೆ? :)

@ಸಂಧ್ಯಾ:
ಧನ್ಯವಾದ.. ಬ್ಲಾಗಿಗೆ ಬರ್ತಾ ಇರು :)

@ಪ್ರಶಸ್ತಿ:
ಇದ್ರಲ್ಲದಾ ಬಪ್ಪದು!

@ಸುನಾಥ ಕಾಕಾ:
ಧನ್ಯವಾದ. ಇದು ಯಾರನ್ನೂ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದಲ್ಲ. ಯಾರು ಬರುತ್ತಾರೋ ಗೊತ್ತಿಲ್ಲ!

@ಸೋಮ:
ಹತ್ತಿಸ್ಬೇಡ!

shivu ಹೇಳಿದರು...

super aa gelati begane ninn sangatiyagali