ಶುಕ್ರವಾರ, ಮಾರ್ಚ್ 23, 2012

ಯುಗಾದಿ

ಪ್ರತಿ ಅಂತ್ಯಕ್ಕೊಂದು ನಾಂದಿ ಇರುವಂತೆ
ಶರತ್ಕಾಲದ ನಂತರದ ವಸಂತ ಮಾಸದಂತೆ
ಇರುಳಿನ ಹಿಂದೆಯೇ ಬರುವ ಹಗಲಿನಂತೆ

ಹಳೇ ಬೇರಿನಿಂದ ಹೊಸ ಚಿಗುರು ಬರುವಂತೆ
ಹಿರಿಯರ ಆಶೀರ್ವಾದ ನವ ಪೀಳಿಗೆಯ ಏಳ್ಗೆಯಂತೆ
ಎಲ್ಲಾ ಪುರಾತನ ಸೃಷ್ಟಿ ನವೀನವಾಗುವಂತೆ

ಹೊಸ ಹುಮ್ಮಸ್ಸು ಜಡವನ್ನು ಕಿತ್ತೊಗೆಯಲಿ
ಕಾದಿದ್ದ ಎಲ್ಲಾ ಕನಸುಗಳು ನನಸಾಗಲಿ
ಹರುಷದ ಅಲೆಯು ಎಲ್ಲೆಲ್ಲೂ ಹರಡಲಿ

ಯುಗಾದಿಯು, ಬೇವಿನ ಕಹಿ ಕಡಿಮೆ ತರಲಿ
ಬೆಲ್ಲದ ಸಿಹಿ ಬಾಳಲ್ಲಿ ಹೊಳೆಯಾಗಿ ಹರಿಯಲಿ
ಬೇವು-ಬೆಲ್ಲ ಜೀವನದ ಸಾರವಾಗಲಿ

6 ಕಾಮೆಂಟ್‌ಗಳು:

ಸೋಮಶೇಖರ ಹುಲ್ಮನಿ ಹೇಳಿದರು...

ಲಕ್ಷ್ಮಿ ,
ಯುಗಾದಿಯ ಶುಭಾಶಯಗಳು ...
ಕಹಿ ಕಡಿಮೆಯಾದರೆ ಸಿಹಿಯ ಮಹತ್ವ ಕಡಿಮೆಯಾಗುವುದಿಲ್ಲವೇ ?

sunaath ಹೇಳಿದರು...

ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿಯನ್ನು ತರಲಿ.

ಜಲನಯನ ಹೇಳಿದರು...

ಬಾಳದೋಣಿಯ ಪಯಣದ ಸಿಹಿ-ಕಹಿಯ ಒಂದು ನಿಲುಗಡೆ ಬಂದರು...ಯುಗಾದಿಯ ಈ ಕವನ. ನಿಮ್ಮೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು

Harisha - ಹರೀಶ ಹೇಳಿದರು...

ಪ್ರತಿ ವರುಷವೂ ಹೊಸ ಹರುಷ ತರುವ ಯುಗಾದಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಯುಗಾದಿಯ ಶುಭಾಶಯಗಳು. (ತಡವಾಗಿದ್ದಕ್ಕೆ ಕ್ಷಮೆಯಿರಲಿ)

Lakshmi Avina ಹೇಳಿದರು...

ಎಲ್ಲರಿಗೂ ಧನ್ಯವಾದಗಳು.
@ ಸೋಮು: ಕಹಿಯ ಪ್ರಮಾಣ ಸಿಹಿಗಿಂತ ಕೊಂಚ ಕಡಿಮೆ ಇರಲಿ ಎನ್ನುವುದು ನನ್ನ ಆಸೆ.

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಯುಗಾದಿಯ ಶುಭಾಶಯಗಳು ... chandada kavana